ಕರ್ನಾಟಕ

karnataka

ETV Bharat / state

ಫೋಕ್ಸೋ ನ್ಯಾಯಾಲಯ ಸ್ಥಾಪಿಸಿದ್ರೂ ಲೈಂಗಿಕ ದೌರ್ಜನ್ಯಗಳು ತಗ್ಗುತ್ತಿಲ್ಲ: ನ್ಯಾಯಾಧೀಶ ಮಲ್ಲೂರು ಕಳವಳ - WOMAN AND CHILD WELFARE OFFICE CNDT WOMAN DAY CELE

ಬಳ್ಳಾರಿಯ ಎಸ್ಪಿ ವೃತ್ತದ ಬಳಿಯಿರುವ ಮಹಿಳಾ ಮತ್ತು‌‌ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿಂದು ರಾಷ್ಟ್ರೀಯ ಹೆಣ್ಮಕ್ಕಳ ದಿನಾಚರಣೆ ಆಚರಿಸಲಾಯಿತು.

WOMAN DAY CELEBRATION NEWS
ಫೋಕ್ಸೋ ನ್ಯಾಯಾಲಯ ಸ್ಥಾಪಿಸಿದ್ರೂ ಕೂಡ ಲೈಂಗಿಕ ದೌರ್ಜನ್ಯ ತಗ್ಗುತ್ತಿಲ್ಲ: ನ್ಯಾಯಾಧೀಶ ಮಲ್ಲೂರು ಕಳವಳ

By

Published : Jan 24, 2020, 5:06 PM IST

ಬಳ್ಳಾರಿ:ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೋಕ್ಸೋ ನ್ಯಾಯಾಲಯ ಸ್ಥಾಪಿಸಿದ್ರೂ ಕೂಡ ಲೈಂಗಿಕ ದೌರ್ಜನ್ಯಗಳ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಅರ್ಜುನ ‌ಮಲ್ಲೂರ್ ಕಳವಳ ವ್ಯಕ್ತಪಡಿಸಿದ್ದಾರೆ.

ಫೋಕ್ಸೋ ನ್ಯಾಯಾಲಯ ಸ್ಥಾಪಿಸಿದ್ರೂ ಕೂಡ ಲೈಂಗಿಕ ದೌರ್ಜನ್ಯ ತಗ್ಗುತ್ತಿಲ್ಲ: ನ್ಯಾಯಾಧೀಶ ಮಲ್ಲೂರು ಕಳವಳ

ಬಳ್ಳಾರಿಯ ಎಸ್ಪಿ ವೃತ್ತದ ಬಳಿಯಿರುವ ಮಹಿಳಾ ಮತ್ತು‌‌ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿಂದು ರಾಷ್ಟ್ರೀಯ ಹೆಣ್ಮಕ್ಕಳ ದಿನಾಚರಣೆಗೆ ಚಾಲನೆ ನೀಡಿಎಸ್.ಅರ್ಜುನ ‌ಮಲ್ಲೂರ್ಮಾತನಾಡಿದ್ರು.

ಹೆಣ್ಮಕ್ಕಳ‌ ಮೇಲಿನ‌ ದೌರ್ಜನ್ಯ ಹಾಗೂ ಶೋಷಣೆಯಂಥ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆಯೇ ಹೊರತು, ಇಳಿಮುಖ ಕಾಣುತ್ತಿಲ್ಲ. ಮಕ್ಕಳ‌ ಮೇಲಿನ‌ ಮಾನಸಿಕ ಒತ್ತಡವೂ ಹೆಚ್ಚಾಗುತ್ತಿದೆ. ಅದಕ್ಕೆ ಬಹುಮುಖ್ಯ ಕಾರಣ ಜಾಗೃತಿ‌ಯ ಕೊರತೆ. ಇಂಥ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪ್ರತ್ಯೇಕವಾದ ನ್ಯಾಯಾಲಯವನ್ನೂ ಕೂಡ ಸ್ಥಾಪಿಸಲಾಗಿದೆ. ಇಷ್ಟಿದ್ರೂ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ವಿಷಾದಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ಮಾತನಾಡಿ, ಹೆಣ್ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಯ ಪ್ರಕರಣಗಳು ಗಣನೀಯವಾಗಿ ಕಮ್ಮಿಯಾಗಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ನಾನಾ ರೀತಿಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ರೂ ಆಧುನಿಕ ಸಮಾಜದಲ್ಲಿ ಹೆಣ್ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗುತ್ತಿಲ್ಲ ಅನ್ನೋದು ದುರಂತ. ಇನ್ನಾದ್ರೂ ಸಾರ್ವಜನಿಕರು ಹೆಣ್ಮಕ್ಕಳ ಮೇಲಿರುವ ತಾತ್ಸಾರ ಮನೋಭಾವವನ್ನು ಹೋಗಲಾಡಿಸಿ ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.

ABOUT THE AUTHOR

...view details