ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಪತಿಯನ್ನೇ ಕೊಲೆ ಮಾಡಿದ ಪತ್ನಿ ಅಂದರ್​​! - ಹೊಸಪೇಟೆ ಟಿಬಿ ಡ್ಯಾಂ ಕೊಲೆ ಆರೋಪಿ ಬಂಧನ

ಹೊಸಪೇಟೆ ಟಿಬಿ ಡ್ಯಾಂ ಬಳಿ ನಡೆದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

Wife killed Husband in TB Dam Hospet
ಹೊಸಪೇಟೆಯಲ್ಲಿ ಪತಿಯನ್ನು ಕೊಲೆ ಮಾಡಿದ ಪತ್ನಿ

By

Published : Apr 6, 2021, 4:57 PM IST

ಹೊಸಪೇಟೆ: ನಗರದ ಟಿಬಿ ಡ್ಯಾಂನಲ್ಲಿ ಮಾ. 20ರಂದು ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ. 20ರಂದು ಮೈಕಲ್ ಜಾನ್ (40) ಎಂಬುವರನ್ನು ಕೊಲೆ ಮಾಡಲಾಗಿತ್ತು. ಇದೀಗ ಕೊಲೆ ಆರೋಪಿ ಮೃತನ ಪತ್ನಿ ಸರ್ಗುಣಂ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಸರ್ಗುಣಂ ಪತಿಯನ್ನು ಕೊಲೆ‌‌ ಮಾಡಿಸಿದ್ದಾಳೆ ಎಂದು ತಿಳಿದು ಬಂದಿದೆ.

ಆರೋಪಿಗಳ ಪತ್ತೆಗಾಗಿ ಟಿಬಿ ಡ್ಯಾಂ ಸಿಪಿಐ ನಾರಾಯಣ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಮೈಕಲ್​ ಜಾನ್​​​​ನನ್ನು ಪತ್ನಿ ಸರ್ಗುಣಂ, ತಮಿಳುನಾಡಿನ ಮಾವನ ಮಕ್ಕಳಾದ ವಿನೋದ್ ಹಾಗೂ ಅಶೋಕ್​ ಜೊತೆ ಸಂಚು ರೂಪಿಸಿ ಕೊಲೆ‌ ಮಾಡಿರುವುದು ಗೊತ್ತಾಗಿದೆ.

ಓದಿ : ಕೆಲಸಕ್ಕೆ ಹೋಗಲು ನಿರಾಕರಿಸಿದ ಮಗಳನ್ನ ಕಟ್ಟಿ ಹಾಕಿದ ಪಾಪಿ ತಂದೆ!

ಕೊಲೆ ಆರೋಪಿ ಸರ್ಗುಣಂಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.

ABOUT THE AUTHOR

...view details