ಹೊಸಪೇಟೆ :ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಾಲಯ್ಯನ ಕೋಟೆಯಲ್ಲಿ ಮದ್ಯವ್ಯಸನಿಯೊಬ್ಬ ಕೊಡಲಿಯಿಂದ ತನ್ನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಂತಮ್ಮ(25) ಕೊಲೆಯಾದ ಮಹಿಳೆ. ಪತಿ ಮಂಜುನಾಥ್ ಕೊಲೆ ಮಾಡಿದ ಆರೋಪಿ. ಮಹಿಳೆಯು ಕಳೆದ 20 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ. ಮಡಿಲಲ್ಲಿ ಹಸುಗೂಸನ್ನು ಎತ್ತಿಕೊಂಡು ಕುಳಿತಿದ್ದಾಗಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.