ಕರ್ನಾಟಕ

karnataka

ETV Bharat / state

ಪತ್ನಿ ಶೀಲದ ಮೇಲೆ ಶಂಕೆ... ಅರಣ್ಯಕ್ಕೆ ಕರೆದೊಯ್ದು ಹೆಂಡತಿ, 3 ವರ್ಷದ ಮಗು ಕೊಲೆಗೈದ ಪತಿ - undefined

ಹೆಂಡತಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಪತಿರಾಯ ಅನೈತಿಕ ಸಂಬಂಧ ಹೊಂದಿಲ್ಲವೆಂದು ದೇವರ ಮೇಲೆ ಆಣೆ ಮಾಡುವಂತೆ ಹಟ ಹಿಡಿದು, ಅರಣ್ಯಕ್ಕೆ ಕರೆದೊಯ್ದು ಪತ್ನಿ ಹಾಗೂ ಮೂರು ವರ್ಷದ ಪುತ್ರಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ.

ಶೀಲ ಶಂಕಿಸಿ ಪತ್ನಿ, ಪುತ್ರಿಯ ಬರ್ಬರ ಕೊಲೆ

By

Published : Apr 28, 2019, 11:58 AM IST

ಬಳ್ಳಾರಿ:ಅನೈತಿಕ‌ ಸಂಬಂಧ ಹೊಂದಿಲ್ಲ ಅಂತಾ ಹೇಳಿ ದೇವರ ಮೇಲೆ ಆಣೆ ಮಾಡುವಂತೆ ದುಂಬಾಲು ಬಿದ್ದ ಪತಿರಾಯ, ಪತ್ನಿ ಹಾಗೂ ಪುತ್ರಿಯನ್ನ ಗುಂಡಾರಣ್ಯಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ನಡೆದಿದೆ.

ಶೀಲ ಶಂಕಿಸಿ ಪತ್ನಿ, ಪುತ್ರಿಯ ಬರ್ಬರ ಕೊಲೆ

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ನಿವಾಸಿ ಸಿದ್ಧಪ್ಪ ಕೊಲೆಗೈದಿರುವ ಆರೋಪಿ. ಪವಿತ್ರಾ (30) ಮತ್ತು ಆಕೆಯ ಮಗಳು ಮಮತಾ (3) ಕೊಲೆಯಾದವರು ಎಂದು ಗುರುತಿಸಲಾಗಿದೆ.

ಹೆಂಡತಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಪತಿರಾಯ ಅನೈತಿಕ ಸಂಬಂಧ ಹೊಂದಿಲ್ಲವೆಂದು ದೇವರ ಮೇಲೆ ಆಣೆ ಮಾಡುವಂತೆ ಹಟ ಹಿಡಿದಿದ್ದಾನೆ. ನಂತರ ಪತ್ನಿ ಹಾಗೂ ಪುತ್ರಿಯನ್ನ ಹಡಗಲಿ ತಾಲೂಕಿನ‌ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಇಬ್ಬರ ತಲೆ ಮೇಲೂ ಕಲ್ಲನ್ನು ಎತ್ತಿಹಾಕಿ ಕೊಲೆಗೈದಿದ್ದಾನೆ.

ಘಟನೆಯ ವಿವರ:

ಮೊದಲು ಪವಿತ್ರಾಳನ್ನ ಹೊಡೆದು ಕೊಲೆಗೈದ ಸಿದ್ಧಪ್ಪ, ಆ ಬಳಿಕ ಮೂರು ವರ್ಷದ ಮುಗ್ಧಕಂದಮ್ಮ ಮಮತಳನ್ನ ಬರ್ಬರವಾಗಿ ಹತ್ಯೆಗೈದಿದ್ದಾನೆ. ಜೊತೆಗೆ ತಾನೆ ಪವಿತ್ರಾಳ ಪೋಷಕರಿಗೆ ಮೊಬೈಲ್ ಕರೆಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ.‌ ಅವಳ ಶವವನ್ನ ಮತ್ತೆ ನಮ್ಮ ಗ್ರಾಮಕ್ಕೆ ತರುವುದಿಲ್ಲ ಎಂದು ಮಾತು ಕೊಟ್ಟರೆ ಮೃತದೇಹಗಳು ಎಲ್ಲಿವೆಯೆಂದು ಹೇಳುವೆ ಎಂದು ಪೊಲೀಸರ ಬಳಿ ಮಾತು ತೆಗೆದುಕೊಂಡು ಮೃತ ದೇಹವನ್ನು ತೋರಿಸಿದ್ದಾನೆ.

ಮೊದಲೇ ನನ್ನ ಪತ್ನಿಗೆ ಅನೈತಿಕ ಸಂಬಂಧ ಇತ್ತು, ಇನ್ನೂ ಆ ಮಗು ಕೂಡ ನನ್ನ ರಕ್ತ ಹಂಚಿಕೊಂಡು ಹುಟ್ಟಿದ್ದಲ್ಲ. ಹೀಗಾಗಿ ಕೊಲೆಗೈದೆ ಎಂದು ವಿಚಾರಣೆ ವೇಳೆ ಆರೋಪಿ ಸಿದ್ಧಪ್ಪ ಹೇಳಿದ್ದಾನೆ.
ಹಲುವಾಗಲು ಪೊಲೀಸರಿಂದ ಪ್ರಕರಣ ಬಯಲಿಗೆ ಬಂದಿದ್ದು, ಹಿರೇ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details