ಕರ್ನಾಟಕ

karnataka

ETV Bharat / state

ಆರನೇ ವೇತನ ಆಯೋಗ ಜಾರಿ ಮಾಡಲು ಈ ಸರ್ಕಾರಕ್ಕೆ ಏನು ಕಷ್ಟ: ಖಾದರ್​ ಪ್ರಶ್ನೆ - Former Minister U. T Khader

ಸಾರಿಗೆ ನೌಕರರ ಸಮಸ್ಯೆಯನ್ನ ಈ ಸರ್ಕಾರ ತಾಯಿ ಹೃದಯದಿಂದ ನೋಡಬೇಕಿತ್ತು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

u-t-khadhar
ಯು.ಟಿ ಖಾದರ್

By

Published : Apr 8, 2021, 7:50 PM IST

ಬಳ್ಳಾರಿ: ರಾಜ್ಯ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿರೋದು ಬೇಸರದ ಸಂಗತಿಯಾಗಿದೆ. ಈ ಸರ್ಕಾರಕ್ಕೆ ಆರನೇ ವೇತನ ಆಯೋಗ ಜಾರಿ‌ ಮಾಡಲು ಏನು ಕಷ್ಟ ಎಂದು ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ನಗರದ ನಕ್ಷತ್ರ ಎಲ್.ಆರ್ ಹೋಟೆಲ್​ನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಮುಷ್ಕರ ಮಾಡಬಾರದಿತ್ತು. ಇದು ವೈಯಕ್ತಿಕವಾಗಿ ನನಗೆ ಬೇಸರ ಮೂಡಿಸಿದೆ ಎಂದರು.

ಯು.ಟಿ.ಖಾದರ್, ಮಾಜಿ ಸಚಿವ

ಸಾರಿಗೆ ನೌಕರರ ಸಮಸ್ಯೆಯನ್ನ ಈ ಸರ್ಕಾರ ತಾಯಿ ಹೃದಯದಿಂದ ನೋಡಬೇಕಿತ್ತು. ನಮ್ಮದು ಬಡವರ ಪರ ಸರ್ಕಾರ ಅಂತೀರಾ. ಹಾಗಾದರೆ 12 ಸಾವಿರ ರೂ. ವೇತನದಲ್ಲಿ ಅವರು ಹೇಗೆ ಜೀವನ ನಡೆಸಬೇಕು.? ಆರನೇ ವೇತನ ಆಯೋಗ ಜಾರಿ ಮಾಡಲಿಕ್ಕೆ ಇವರಿಗೇನು ಕಷ್ಟ? ಈ ಸರ್ಕಾರ ಬಡ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದನ್ನ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಹೃದಯವಿಲ್ಲದ, ಮಾನವೀಯತೆ ಇಲ್ಲದ ಸರ್ಕಾರ ಇದೆ. ಇವರಿಗೆ ಮತ್ತೊಮ್ಮೆ ಅವಕಾಶ ಕೊಡಬಾರದೆಂದು ಮನವಿ ಮಾಡಿದರು.

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಸಜ್ಜಾಗಿದೆ. ವಿವಿಧ ತಂಡಗಳನ್ನ ರಚನೆ ಮಾಡಿ ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರ ಇದ್ದಾಗ ಪಾಲಿಕೆಗಳಿಗೆ ಬಜೆಟ್​ನಲ್ಲಿ ಸಾಕಷ್ಟು ಹಣ ಮೀಸಲಿಡಲಾಗಿತ್ತು. ಆದರೆ ಬಿಜೆಪಿಗೆ ಜನರ ಹಿತಾಸಕ್ತಿ ಬೇಕಿಲ್ಲ. ಹೀಗಾಗಿ ಈ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ಕೊಡಬಾರದೆಂದು ಕಿಡಿಕಾರಿದರು.

ಓದಿ:ಮೋದಿ ಜೊತೆಗಿನ‌ ಸಭೆಗೂ ಮುನ್ನ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ

ABOUT THE AUTHOR

...view details