ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಬೆಳೆ ನಷ್ಟ ಕುರಿತಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮನೆ, ಬೆಳೆ ನಷ್ಟದ ವರದಿ ಕೇಂದ್ರಕ್ಕೆ ಸಲ್ಲಿಸುತ್ತೇನೆ: ಸಿಎಂ ಬಿಎಸ್ವೈ - bs yadiyurappa ballary visit
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾದ ಬೆಳೆ ನಷ್ಟದ ವರದಿ ಕೊಟ್ಟ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಬಳ್ಳಾರಿಯ ಜಿಂದಾಲ್ ಏರ್ಪೋರ್ಟ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ, ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ. ಆ ಭಾಗದಲ್ಲಿ ಏನೇನು ಹಾನಿಯಾಗಿದೆ ಎಂಬುದರ ಕುರಿತು ವರದಿ ಪಡೆಯಲಿದ್ದೇನೆ. ಮನೆ ಕಳೆದುಕೊಂಡವರ ಮಾಹಿತಿ ಜೊತೆಗೆ ಬೆಳೆ ಹಾನಿ ಬಗ್ಗೆಯೂ ಮಾಹಿತಿ ಪಡೆಯುವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುರಿದ ಮಹಾಮಳೆಯಿಂದಾದ ಬೆಳೆ ನಷ್ಟದ ಕುರಿತು ಪಿಎಂ ಬಳಿಯೂ ಸಹ ಈಗಾಗಲೇ ಮಾತನಾಡಿರುವೆ. ಕರ್ನಾಟಕದಲ್ಲಿ ಮಳೆಯಿಂದಾದ ಬೆಳೆ ನಷ್ಟದ ವರದಿ ಕೊಟ್ಟ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.