ಬಳ್ಳಾರಿ: ಮಾ.30ಕ್ಕೆ ಕಾಲುವೆ ನೀರು ನಿಲ್ಲಿಸಿದರೆ ಅಂದೇ ತುಂಗಭದ್ರಾ ಡ್ಯಾಂ, ಜಲಾಶಯದ ಅಧಿಕಾರಿಗಳ, ಶಾಸಕರ, ಸಂಸದರ, ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟಲ್ನಲ್ಲಿ ಸುದ್ದಿಗಾರರೊಂದಿಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ಜಲಾಶಯದ ಕೆಳದಂಡೆಯ ಕಾಲುವೆಯಿಂದ ರೈತರು ಬೆಳೆದ ಬೆಳೆಗೆ ಏಪ್ರಿಲ್ 10 ವರೆಗೆ ನೀರನ್ನು ನೀಡುತ್ತವೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹೇಳಿದ್ದರು. ಆದ್ರೀಗ ಮಾ.30 ರವರೆಗೆ ನೀರು ಬಿಡುತ್ತವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಂಭವಿಸಿದಂತೆ ಶನಿವಾರ ಮತ್ತು ಭಾನುವಾರ ರೈತರೆಲ್ಲಾ ಸೇರಿ ಶಾಸಕರು, ಸಂಸದರ ಹಾಗೂ ಸಚಿವರ ಮನೆಗಳಿಗೆ ಹೋಗಿ ಭೇಟಿ ಮಾಡಿ ನೀರು ಬಿಡುಗಡೆ ಬಗ್ಗೆ ತಿಳಿಸುತ್ತವೆ. ಅವರು ಒಪ್ಪಿಕೊಂಡು ಏಪ್ರಿಲ್ 10 ರವರೆಗೆ ನೀರು ಬಿಡಿಸಿದ್ರೆ ಸುಮ್ಮನಾಗುತ್ತವೆ, ಇಲ್ಲದಿದ್ದರೆ ಅವರ ಮನೆಗಳ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತೇವೆಂದು ತಿಳಿಸಿದರು.