ಕರ್ನಾಟಕ

karnataka

ETV Bharat / state

ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯ ಜಪಿಸಿದ ಶಾಸಕ ಸೋಮಶೇಖರ ರೆಡ್ಡಿ - ಜಾತಿ-ಬೇಧ ಹಾಗೂ ಮತ-ಪಂಥಗಳಿಗೆ ಇಲ್ಲಿ ಆಸ್ಪದವಿಲ್ಲ

ನಿನ್ನೆಯ ದಿವಸ ಸದನದಲ್ಲಿ ಬಸವರಾಜ್​ ಪಾಟೀಲ್​ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಗ್ಗೆ ಧನಿ ಎತ್ತಿದ್ದು, ಅದರಲ್ಲಿ ಯಾವುದೇ ದುರುದ್ದೇಶವಿಲ್ಲ, ನಾವೆಲ್ಲರೂ ಒಂದೇ ಎಂದು ಬದುಕೋಣ. ಪಾಟೀಲ್​ರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ ಎಂದು ಶಾಸಕ ಸೋಮಶೇಖರ್​ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

Reddy
ಸೋಮಶೇಖರ್​ ರೆಡ್ಡಿ ಪ್ರತಿಪಾದನೆ

By

Published : Mar 7, 2020, 12:46 PM IST

ಬಳ್ಳಾರಿ: ‌ಯಾವುದೇ ಜಾತಿ - ಬೇಧ ಹಾಗೂ ಮತ-ಪಂಥಗಳಿಗೆ ಇಲ್ಲಿ ಆಸ್ಪದವಿಲ್ಲ. ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯದಡಿ ಮುನ್ನಡೆಯಬೇಕೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪ್ರತಿಪಾದಿಸಿದ್ದಾರೆ.

ಸೋಮಶೇಖರ್​ ರೆಡ್ಡಿ ಪ್ರತಿಪಾದನೆ

ಬಳ್ಳಾರಿಯಲ್ಲಿಂದು ವಿವಿಧ ಸಿಸಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತ ರಚಿಸಿದ್ದು ಪರಿಶಿಷ್ಟ ಜಾತಿಯವರು, ವಾಲ್ಮೀಕಿ ರಾಮಾಯಣ ರಚಿಸಿದ್ದು, ಪರಿಶಿಷ್ಟ ಪಂಗಡದವರು. ಭಾರತದ ಸಂವಿಧಾನವನ್ನ ಬರೆದಿದ್ದು ಡಾ.ಬಿ.ಅರ್. ಅಂಬೇಡ್ಕರ್​ ಎಂದು ನಿ‌ನ್ನೆಯ ದಿನ ಸದನದಲ್ಲಿ ಶಾಸಕ ಬಸವರಾಜ ಪಾಟೀಲ ಯತ್ನಾಳ್ ಹೇಳಿದ್ದಾರೆ. ಅವರ ಈ ಹೇಳಿಕೆ ಯಾವುದೇ ದುರುದ್ದೇಶದಿಂದ ಕೂಡಿಲ್ಲ, ಅವರಿಂದಲೇ ನಾವು ಇಂದಿಗೂ ಚೆನ್ನಾಗಿ ಬಾಳುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ದಿನಮಾನದಲ್ಲಿ ಅಂತಹವರನ್ನ ಮರೆಯಬಾರದು ಹಾಗೂ ದೂರ ಇಡಬಾರದು. ಎಲ್ಲರೂ ಹೊಂದಿಕೊಂಡು ಹೋಗಬೇಕು ಎಂದು ಹೇಳಿದ್ದಾರೆಯೇ ಹೊರತು, ಬೇರಾವ ಅರ್ಥದಲ್ಲಿ ಹೇಳಿಲ್ಲ. ಯತ್ನಾಳ್ ಹೇಳಿಕೆಯನ್ನ ಅಪಾರ್ಥ ಮಾಡಿಕೊಳ್ಳುವುದು ಬೇಡ ಎಂದು ಯತ್ನಾಳ್​ ಹೇಳಿಕೆಯನ್ನ ಸಮರ್ಥಿಸಿಕೊಂಡರು.

ABOUT THE AUTHOR

...view details