ಹೊಸಪೇಟೆ:ನಮಗೆ ಕಣ್ಣೀರು ಹಾಕುವಂತಹ ಮುಖ್ಯಮಂತ್ರಿ ಬೇಕಿಲ್ಲ. ರಾಜ್ಯದ ಕಣ್ಣೀರನ್ನು ಒರೆಸುವ ಮುಖ್ಯಮಂತ್ರಿ ಬೇಕಾಗಿದ್ದಾರೆ ಎಂದು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಹೇಳಿದ್ರು.
ಅಳುವುದರಲ್ಲಿ ನನಗೆ ಹೆಚ್ಡಿಕೆ ಪೈಪೋಟಿಯಲ್ಲಿದ್ದಾರೆ : ಶೃತಿ ಇಂದು ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರ ರಂಗದಲ್ಲಿ ನನಗೆ ಅಳುವ ಪಾತ್ರಗಳನ್ನು ನೀಡುತ್ತಾರೆ. ನಾನು ಕಷ್ಟದ ಹಾಗೂ ನೋವಿನ ಪಾತ್ರಗಳಲ್ಲಿ ಅಳುವುದನ್ನು ಜನರು ಮೆಚ್ಚುತ್ತಾರೆ. ಶೃತಿ ಕಣ್ಣೀರು ಹಾಕುವುದರಲ್ಲಿ ಎತ್ತಿದ ಕೈ. ಆದ್ರೆ, ಇತ್ತೀಚಿನ ದಿನದಲ್ಲಿ ನನಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪೈಪೋಟಿಯಲ್ಲಿದ್ದಾರೆ. ಅವರು ನನಗಿಂತ ಚೆನ್ನಾಗಿ ಅಳುತ್ತಾರೆಂದು ಕುಟುಕಿದರು.
ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ಸಚಿವರ ಅವಶ್ಯಕತೆಯಿದೆ. ಆನಂದ್ಸಿಂಗ್ ಅವರ ರಾಜೀನಾಮೆಯಿಂದ ಇಂದು ಬಿಜೆಪಿ ಆಡಳಿತದಲ್ಲಿದೆ. ಅವರು ಸ್ವಾರ್ಥಕ್ಕಾಗಿ ರಾಜೀನಾಮೆಯನ್ನು ನೀಡಿಲ್ಲ. 14 ತಿಂಗಳು ಗಂಡನ ಮನೆಯಲ್ಲಿದ್ದರು. ಗಂಡನ ಮನೆಯಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ನೀಡಲಿಲ್ಲ. ಅದಕ್ಕಾಗಿ ಮತ್ತೆ ತವರು ಮನೆಗೆ ಬಂದಿದ್ದಾರೆ ಎಂದು ಬಿಜೆಪಿಗೆ ಮರಳಿರುವುದಕ್ಕೆ ಸಮರ್ಥನೆ ನೀಡಿದರು.
ಬಿ.ಎಸ್.ವೈ ಸರ್ಕಾರದಲ್ಲಿ ಮಹಿಳೆಯರಿಗಾಗಿ ಪ್ರಧಾನ ಸ್ಥಾನ ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು, ಪ್ರಧಾನಮಂತ್ರಿ ಅವರು ಬೇಟಿ ಬಚಾವ್ ಬೇಟಿ ಪಡಾವ್ ಎಂಬ ಮಹಿಳೆಯರ ಜಾಗೃತಿ ಯೋಜನೆಗಳನ್ನು ಜಾರಿಗೆ ತಂದರು. ಅದಕ್ಕಾಗಿ ಎಲ್ಲಾ ಮಹಿಳೆಯರು ಆನಂದ್ ಸಿಂಗ್ ಅವರನ್ನು ಈ ಉಪಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಬೇಕು ಎಂದು ಶೃತಿ ಮನವಿ ಮಾಡಿದ್ರು.