ಹೊಸಪೇಟೆ (ವಿಜಯನಗರ):ತುಂಗಭದ್ರಾ ಜಲಾಶಯದಿಂದ ಇಂದು ಬೆಳಗ್ಗೆ 30 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ 1,03,888 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ - ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯದಿಂದ 2 ಅಡಿ ಎತ್ತರದಲ್ಲಿ 10 ಕ್ರಸ್ಟ್ ಗೇಟ್ ಹಾಗೂ ಎರಡೂವರೆ ಅಡಿ ಎತ್ತರದಲ್ಲಿ 20 ಕ್ರಸ್ಟ್ ಗೇಟ್ಗಳ ಮೂಲಕ ಒಟ್ಟು 1,03,888 ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಿದೆ.
2 ಅಡಿ ಎತ್ತರದಲ್ಲಿ 10 ಕ್ರಸ್ಟ್ ಗೇಟ್ ಹಾಗೂ ಎರಡೂವರೆ ಅಡಿ ಎತ್ತರದಲ್ಲಿ 20 ಕ್ರಸ್ಟ್ ಗೇಟ್ಗಳ ಮೂಲಕ ಒಟ್ಟು 1,03,888 ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 1,85,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಾಲುವೆಗೆ 8,775 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 1631.34 ಟಿಎಂಸಿ ಇದ್ದು, 94.05 ಟಿಎಂಸಿ ನೀರು ಸಂಗ್ರಹವಾಗಿದೆ.
ನಿರಂತರ ಮಳೆಯಿಂದ ಹಂಪಿಯ ನದಿ ಪಾತ್ರದ ಸ್ಮಾರಕಗಳು ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ಕಾಲುದಾರಿ ಜಲಾವೃತವಾಗಿದೆ. ಅಲ್ಲದೇ, ಕೋದಂಡರಾಮ ದೇವಸ್ಥಾನದ ಆವರಣ ಕೂಡ ಜಲಾವೃತವಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಸರಿಸಮಾನವಾಗಿ ನೀರು ಹರಿಯುತ್ತಿದೆ.