ಕರ್ನಾಟಕ

karnataka

ETV Bharat / state

ಕ್ವಾಯಿನ್ ಹಾಕಿದರೂ ವೇಷ್ಟಾಗುತ್ತೆ.. ಶುದ್ಧ ಕುಡಿಯುವ ನೀರಿನ ಘಟಕಕ್ಕೇ ದಾಹ, ದಾಹ.. - undefined

ನಗರದ ತಾಳೂರು ರಸ್ತೆಯ ಹರಿಶ್ಚಂದ್ರ ನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದ್ದು, ಈ ಘಟಕದಲ್ಲಿ ಸರಿಯಾಗಿ ನೀರು ಬರದೆ ಜನರು ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ನಗರದಲ್ಲಿನ ಜನರ ಮನವಿ.

ದುಸ್ಥಿತಿಯಿಂದ ಕುಡಿರುವ ನೀರಿನ ಶುದ್ದಿಕರಣ ಘಟಕ

By

Published : May 12, 2019, 5:33 PM IST

ಬಳ್ಳಾರಿ: ನಗರದ ತಾಳೂರು ರಸ್ತೆಯ ಹರಿಶ್ಚಂದ್ರನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಸಮರ್ಪಕವಾಗಿ ಅದರಲ್ಲಿ ನೀರು ದೊರೆಯದೆ ಅಲ್ಲಿನ ಜನ ಕಂಗಾಲಾಗಿದ್ದಾರೆ.

ನಗರದ ತಾಳೂರು ರಸ್ತೆಯ ಹರಿಶ್ಚಂದ್ರ ನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಈ ಘಟಕದಲ್ಲಿ ಸಮರ್ಪಕವಾಗಿ ನೀರು ದೊರೆಯದೆ ಜನರು ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಶ್ರಮಿಕರು, ಬಡವರು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರೆ ಹೆಚ್ಚಾಗಿ ವಾಸ ಮಾಡುತ್ತಿದ್ದು, ಇವರಿಗೆ ಶುದ್ಧ ಕುಡಿಯುವ ನೀರಿನ ಅನಿವಾರ್ಯತೆ ಇದೆ.

ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ

ಈ ಘಟಕದಲ್ಲಿ ಕ್ವಾಯಿನ್​ ಹಾಕಿದರೆ ಬಿಂದಿಗೆಯಲ್ಲಿ ನೀರು ಹಿಡಿದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಆದರೆ,ಬಾಕ್ಸ್​ನಲ್ಲಿಕ್ವಾಯಿನ್ಹಾಕಿದರೆ ಕೆಲವೊಮ್ಮೆ ನೀರು ಬರೋದಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.

ನೀರಿನ ದಾಹ ನೀಗಿಸದ ಶುದ್ಧೀಕರಣ ಘಟಕ :
ಈ ರೀತಿಯ ಶುದ್ಧೀಕರಣ ಘಟಕಗಳು ಜಿಲ್ಲೆಯ ಬಹುತೇಕ ಕಡೆಗಳಲ್ಲಿವೆ. ಆ ಪೈಕಿ ಹರಿಶ್ಚಂದ್ರ ನಗರದಲ್ಲಿನ ಶುದ್ಧೀಕರಣ ಘಟಕವೂ ಕೂಡ ಒಂದು. ಐದು ರೂಪಾಯಿ
ಕ್ವಾಯಿನ್ ಹಾಕಿ ಬಿಂದಿಗೆ ತುಂಬುವಷ್ಟಾದರೂ ನೀರೇ ಬರೋದಿಲ್ಲ. ಒಮ್ಮೊಮ್ಮೆ ಘಟಕದೊಳಗೆಕ್ವಾಯಿನ್ ಸೇರಿಕೊಳ್ಳುತ್ತೆ. ಆದರೆ, ಬಿಂದಿಗೆಯಲ್ಲಿ ನೀರು ಸಂಗ್ರಹ ಆಗೋದಿಲ್ಲ. ಇದಕ್ಕೆ ಸಂಬಂಧಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಗರದ ನಿವಾಸಿ ಸುನೀಲ್​ ಕುಮಾರ್​ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details