ಕರ್ನಾಟಕ

karnataka

ETV Bharat / state

ಡೆಡ್ ಸ್ಟೋರೇಜ್ ತಲುಪಿದ ಶಿವಪುರ ಕೆರೆ.. ಜನರಿಗೆ ತಪ್ಪದ ಕುಡಿಯೋ ನೀರಿನ ಬವಣೆ - ನೀರಿಗಾಗಿ ಮೋಕಾ ಹೋಬಳಿ ನಿವಾಸಿಗಳ ಪರದಾಟ

ಶಿವಪುರ ಕೆರೆಯು ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಕಳೆದ 20 ದಿನಗಳಿಂದ ಗಾಂಧಿನಗರ ವಾಟರ್ ಬೂಸ್ಟರ್‌ಗೆ ನೀರು ಪೂರೈಕೆಯಾಗಿಲ್ಲ.

ನೀರಿಗಾಗಿ ನಿವಾಸಿಗಳ ಪರದಾಟ

By

Published : Jul 28, 2019, 9:51 AM IST

ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಯು ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಕಳೆದ 20 ದಿನಗಳಿಂದ ಗಾಂಧಿನಗರ ವಾಟರ್ ಬೂಸ್ಟರ್‌ಗೆ ನೀರು ಪೂರೈಕೆಯಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಿಗಾಗಿ ನಿವಾಸಿಗಳ ಪರದಾಟ..

ಮೋಕಾ ರಸ್ತೆಯಲ್ಲಿರುವ ಗಾಂಧಿನಗರ ವಾಟರ್ ಬೂಸ್ಟರ್ ಬಳಿ ಬಸವೇಶ್ವರ ನಗರ ಸೇರಿದಂತೆ ಇತರೆ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. 20 ದಿನಗಳಿಂದ ನೀರು ಪೂರೈಕೆ ಮಾಡಿಲ್ಲ. ಬೆಳಗ್ಗೆ ಕೆಲವೆಡೆ ನೀರು ಪೂರೈಕೆ ಮಾಡಲಾಗಿದೆ. ಆದರೆ, ಅದರೊಳಗೆ ಚರಂಡಿ ನೀರು ಮಿಶ್ರಗೊಂಡು, ದುರ್ನಾತ ಬರುತ್ತಿತ್ತು ಎಂದು ನಿವಾಸಿಗಳು ಆಕ್ರೋಶಗೊಂಡರು.20 ದಿನಗಳಿಂದ ನೀರು ಪೂರೈಕೆ ಆಗದ ಕಾರಣ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ABOUT THE AUTHOR

...view details