ಬಳ್ಳಾರಿ: ನಗರದ ಜ್ಯೋತಿ ಆಯಿಲ್ ಸ್ಯಾಡಿಕೆಟ್ ಪೆಟ್ರೋಲ್ ಬಂಕ್ನ ಮಾಲೀಕರು ಮತ್ತು ಸಿಬ್ಬಂದಿ ನೀರು ಮಿಶ್ರಿತ ಪೆಟ್ರೋಲ್ ಹಾಕಿ ಹಣ ಪಡೆದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪೆಟ್ರೋಲ್ ಹಾಕಿಸಿಕೊಂಡ ಬೈಕ್ ಸವಾರರು ಆರೋಪಿಸಿದ್ದಾರೆ.
ನೀರು ಮಿಶ್ರಿತ ಪೆಟ್ರೋಲ್ ಹಾಕಿ ವಂಚನೆ ಆರೋಪ ನಗರದ ಮೊದಲನೇ ರೈಲ್ವೆ ಗೇಟ್ ಹತ್ತಿರದಲ್ಲಿ ಇರುವ ಜ್ಯೋತಿ ಆಯಿಲ್ ಸ್ಯಾಡಿಕೆಟ್ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ಹಾಕಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಮೂರು ನಾಲ್ಕು ಬೈಕ್ ಸವಾರರು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿ ಆಯಿಲ್ ಸ್ಯಾಡಿಕೆಟ್ ಪೆಟ್ರೋಲ್ ಬಂಕ್ನ ಮಾಲೀಕರು ಮತ್ತು ಸಿಬ್ಬಂದಿ ಜೊತೆ ಬೈಕ್ ಸವಾರರು ಗಲಾಟೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಈ ಪೆಟ್ರೋಲ್ ಬಂಕ್ನಲ್ಲಿ ಅನೇಕ ಸರ್ಕಾರಿ ಇಲಾಖೆಯವರು ಬೈಕ್, ಕಾರುಗಳಿಗೆ ಸಹ ಪ್ರತಿನಿತ್ಯ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಅವರಿಗೂ ಇದೇ ರೀತಿಯ ನೀರು ಮಿಶ್ರಿತ ಪೆಟ್ರೋಲ್ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಯೋತಿ ಆಯಿಲ್ ಸ್ಯಾಡಿಕೆಟ್ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಬಂಕ್ನ ಮಾಲೀಕರೇ ಸ್ಥಳಕ್ಕೆ ಆಗಮಿಸಿ, ಪೆಟ್ರೋಲ್ಗೆ ನಾವು ನೀರು ಬೆರಕೆ ಮಾಡಿಲ್ಲ. ಎರಡು-ಮೂರು ದಿನದಿಂದ ಮಳೆಯಾಗುತ್ತಿರುವುದರಿಂದ ಪೈಪ್ ಮುಖಾಂತರ ನೀರು ಒಳಸೇರಿರಬಹುದು ಇದರ ಬಗ್ಗೆ ಗಮನಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.