ವಿಜಯನಗರ: ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ ಸುರಂಗ ಮಾರ್ಗವನ್ನು ಹೊಸಪೇಟೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿಯೇ ಇರುವ ತುಂಗಭದ್ರಾ ಜಲಾಶಯಕ್ಕೆ ಯಾವುದೇ ಧಕ್ಕೆಯಾಗದೆ ಇಂಜಿನಿಯರ್ಗಳು ಅದ್ಭುತ ಎನ್ನುವ ರೀತಿಯಲ್ಲಿ ಈ ಸುರಂಗ ಮಾರ್ಗ ಸಿದ್ಧಪಡಿಸಿದ್ದಾರೆ. ಆದರೀಗ, ಈ ಸುರಂಗ ಮಾರ್ಗದಲ್ಲಿ ನೀರು ಸೋರಿಕೆಯಾಗುತ್ತಿದೆ.
ಮೊದಲು ಇಲ್ಲಿದ್ದ ಹಳೇ ರಸ್ತೆಯಲ್ಲಿ ಎರಡು ಮೂರು ದಿನ ಲೆಕ್ಕವಿಲ್ಲದಷ್ಟು ಬಾರಿ ಟ್ರಾಫಿಕ್ ಜಾಮ್ ಆದ ಉದಾಹರಣೆಗಳಿವೆ. ಪ್ರಮುಖವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಸುರಂಗ ಮಾರ್ಗದ ಮೇಲೆಯೇ ಇರುವ ಕಣಿವೆರಾಯಸ್ವಾಮಿ ದೇವಸ್ಥಾನಕ್ಕೂ ಧಕ್ಕೆಯಾಗದಂತೆ ಇಂಜಿನಿಯರ್ಗಳು ಮಾರ್ಗ ನಿರ್ಮಾಣ ಮಾಡಿದ್ದರು.