ಕರ್ನಾಟಕ

karnataka

ETV Bharat / state

ಜಿಂದಾಲ್​ಗೆ ನೀರು ಸರಬರಾಜು ಮಾಡುವ ವಾಲ್​ ಸೋರಿಕೆ: ರೈತರ ಜಮೀನಿಗೆ ಹಾನಿ - Jindal Steel Factory

ಬಳ್ಳಾರಿ ಜಿಲ್ಲೆ ಕುಷ್ಟಗಿ ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್​ ಉಕ್ಕು ಕಾರ್ಖಾನೆಗೆ ಆಲಮಟ್ಟಿ ಜಲಾಶಯದಿಂದ ನೀರು ಪೂರೈಸುವ ಮುಖ್ಯ ಕೊಳವೆಯ ವಾಲ್​ನಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ರೈತರ ಜಮೀನಿನ ಮಣ್ಣು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

esdd
ಜಿಂದಾಲ್​ಗೆ ನೀರು ಸರಬರಾಜು ಮಾಡುವ ವಾಲ್​ ಸೋರಿಕೆ: ರೈತರ ಜಮೀನಿಗೆ ಹಾನಿ

By

Published : Apr 26, 2020, 2:19 PM IST

ಬಳ್ಳಾರಿ/ ಕುಷ್ಟಗಿ: ತೋರಣಗಲ್ಲು ಬಳಿಯ ಜಿಂದಾಲ್​ ಉಕ್ಕು ಕಾರ್ಖಾನೆಗೆ ಆಲಮಟ್ಟಿ ಜಲಾಶಯದಿಂದ ನೀರು ಪೂರೈಸುವ ಮುಖ್ಯ ಕೊಳವೆ ವಾಲ್​ನಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ರೈತರ ಜಮೀನಿನ ಮಣ್ಣು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಜಿಂದಾಲ್​ಗೆ ನೀರು ಸರಬರಾಜು ಮಾಡುವ ವಾಲ್​ ಸೋರಿಕೆ: ರೈತರ ಜಮೀನಿಗೆ ಹಾನಿ

ತಡರಾತ್ರಿ ಕಂದಕೂರ ಬಳಿಯ ಎಸ್. ಡಿ. ಪಾಟೀಲ್​ ಜಮೀನಿನಲ್ಲಿ ಜಿಂದಾಲ್ ಪೈಪ್​​​​​ಲೈನ್​​ ವಾಲ್​​​​​​​ನಲ್ಲಿ ಬಿರುಕಿನಂದ ಅಪಾರ ಪ್ರಮಾಣದಲ್ಲಿ ನೀರು ಹಳ್ಳದಂತೆ ಹರಿದಿದೆ. ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ತೋರಣಗಲ್ಲವರೆಗೂ ಸುಮಾರು 6-7 ಅಡಿ ಒಳಾಂತರ ವ್ಯಾಸದ ಬೃಹತ್ ಪೈಪ್​ಗಳನ್ನು ಕೃಷಿ ಜಮೀನುಗಳಲ್ಲಿ ಅಳವಡಿಸಲಾಗಿದೆ. ನೀರಿನ ಒತ್ತಡಕ್ಕೆ ವಾಲ್​ನಲ್ಲಿ ಬಿರುಕು ಕಾಣಿಸಿಕೊಂಡು ಪದೇ ಪದೆ ಅಪಾರ ಪ್ರಮಾಣ ನೀರು ಹರಿದು ಜಮೀನು ಹಾಳಗುತ್ತಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆಯೂ ಇದೆ ರೀತಿಯ ಘಟನೆ ನಡೆದಿತ್ತು. ಸಂಬಂಧಿಸಿದ ಜಿಂದಾಲ್ ಕಂಪನಿಯವರು ವಾಲ್​ ದುರಸ್ತಿ ಮಾಡುತ್ತಿದ್ದಾರೆ. ಆದರೆ, ಹಾಳಾದ ಜಮೀನಿಗೆ ಹಾಗೂ ಬೆಳೆಗೆ ಪರಿಹಾರ ನೀಡಿಲ್ಲ.

ABOUT THE AUTHOR

...view details