ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ 8 ಚಾರ್ಚ್ ಶೀಟ್ ಸಿಬಿಐ ಮತ್ತು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಅಂತವರಿಗೆ ಏಕೆ ಸಚಿವ ಸ್ಥಾನ ಅದು ಅರಣ್ಯ ಖಾತೆ ? ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರಶ್ನೆ ಮಾಡಿದರು.
ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಬಹಳ ಉದ್ದ ಮಾತನಾಡುತ್ತಾರೆ, ಅಧಿಕಾರಕ್ಕೆ ಮೊದಲು ಮಾತನಾಡುತ್ತಿದ್ದರು, ಆದ್ರೇ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ 14 ಕೇಸ್ ಇವೆ, ಅದರಲ್ಲಿ 8 ಕೇಸ್ಗಳಿಗೆ ಚಾರ್ಜ್ ಶೀಟ್ ಹಾಕಿದ್ದಾರೆ. 22 ಕೋಟಿ 77 ಲಕ್ಷ ಹಣವನ್ನು ರಾಜ್ಯ ಸರ್ಕಾರಕ್ಕೆ ದ್ರೋಹ ಮಾಡಿದ್ದಾರೆ. ಹಾಗೇ ಕಾನೂನು ಬಾಹಿರ ಕೃತ್ಯವನ್ನು ಎಸೆಗಿದ್ದಾರೆ ಎಂದು ಈ ಕೇಸ್ ಗಳು ತಿಳಿಸುತ್ತವೆ, ಇಂತವರು ಅರಣ್ಯ ಇಲಾಖೆ ಸಚಿವರಾದ್ರೇ ತೋಳನ ಕುರಿ ಕಾಯಲು ಇಟ್ಟತ್ತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಬಿ.ಎಸ್ ಯಡಿಯೂರಪ್ಪ ಮತ್ತು ಆನಂದ್ ಸಿಂಗ್ ಇಬ್ಬರೂ ಕೃಷ್ಣಜನ್ಮ ಸ್ಥಳಕ್ಕೆ ಹೋಗಿ ಬಂದವರು. ಒಟ್ಟಾರೆಯಾಗಿ ಸಚಿವ ಆನಂದ್ ಸಿಂಗ್ನನ್ನು ಕ್ಯಾಬಿನೆಟ್ ನಿಂದ ಕೆಳಗೆ ಇಳಿಸಬೇಕು ಎಂದರು.