ಕರ್ನಾಟಕ

karnataka

ETV Bharat / state

SC/ST ಗೆ 7.5 % ಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದವರು ಈಗ ಎಲ್ಲಿದ್ದಾರೆ: ವಿ.ಎಸ್.ಉಗ್ರಪ್ಪ - VS ugrappa statement about BJP Government

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಎಸ್​ಸಿ/ಎಸ್​ಟಿಯವರಿಗೆ 7.5 ರಷ್ಟು ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಈಗ ಎಲ್ಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ವಿ.ಎಸ್​ ಉಗ್ರಪ್ಪ

By

Published : Oct 26, 2019, 5:12 AM IST

ಬಳ್ಳಾರಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಎಸ್​ಸಿ/ಎಸ್​ಟಿಯವರಿಗೆ 7.5 ರಷ್ಟು ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಹೇಳಿದವರು ಈಗ ಎಲ್ಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಪರಿಸರ ನಾಶದಿಂದ ಅತಿವೃಷ್ಟಿ, ಅನಾವೃಷ್ಟಿ ಆಗಿದೆ. ಪ್ರವಾಹದಿಂದ 22 ಜಿಲ್ಲೆಗಳಲ್ಲಿ ಆಸ್ತಿ-ಪಾಸ್ತಿ, ಕೃಷಿ ಪ್ರದೇಶ ಹಾನಿ ಮತ್ತು ಸಾವಿರಾರು ಎಕರೆ ಬೆಳೆಗಳು ನಾಶವಾಗಿವೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರಿಗೆ ಬೆಳೆ ಹಾಳಾಗಿ ಮತ್ತು ಮನೆ ಹಾಳಾದರೆ ಅವರ ಬದುಕೇ ಬಿದ್ದು ಹೋಗಲಿದೆ. ಅದನ್ನು ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ವಿ.ಎಸ್​ ಉಗ್ರಪ್ಪ ಕಿಡಿ

ಪ್ರಧಾನಿಗಳು ದೇಶದಲ್ಲಿ ಯಾವುದೇ ಸಮಸ್ಯೆಗಳೇ ಇಲ್ಲ ಎಂದು ಉಡಾಫೆ ಮಾತುಗಳನ್ನು ಆಡುತ್ತಾರೆ. ಕೇವಲ 1,200 ಕೋಟಿ ರೂ ಮಾತ್ರ ನೆರೆಪರಿಹಾರ ಕೊಟ್ಟಿದ್ದಾರೆ.‌ ಕೂಡಲೇ 5 ಸಾವಿರ ಕೋಟಿ ರೂ. ಹಣವನ್ನು ಸಂತ್ರಸ್ತರ ಪರಿಹಾರಕ್ಕಾಗಿ ಬಿಡುಗಡೆ ಮಾಡಬೇಕೆಂದು ಹೇಳಿದರು.

ಆರ್​ಎಸ್​ಎಸ್​ಗೆ ಟಾಂಗ್ ನೀಡಿದ ಮಾವಳ್ಳಿ ಶಂಕರ್ :

ಲಾಟಿಗಳನ್ನು ಹಿಡಿದು ಸಂವಿಧಾನದ ಬಗ್ಗೆ ವಿರೋಧ ವ್ಯಕ್ತ ಪಡಿಸುವವರು ಇದ್ದಾರೆ. ಅವರಿಗೆ ಚಡ್ಡಿ ಹೋಗಿ ಪ್ಯಾಂಟ್ ಬಂತು. ಆದರೆ, ಬುದ್ಧಿಮಾತ್ರ ಬರಲಿಲ್ಲ ಎಂದು ಮಾವಳ್ಳಿ ಶಂಕರ್ ಪರೋಕ್ಷವಾಗಿ ಆರ್​ಎಸ್​ಎಸ್​ ವಿರುದ್ಧ ಟೀಕೆ ಮಾಡಿದರು.

ABOUT THE AUTHOR

...view details