ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಎರಡೂ ಕೈಗಳಿಲ್ಲದ ಲಕ್ಷ್ಮೀ ಎಂಬುವರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.
ಮತದಾನ ಜಾಗೃತಿ ರಾಯಭಾರಿಯಾಗಿದ್ದ ಎರಡೂ ಕೈಗಳಿಲ್ಲದ ಲಕ್ಷ್ಮೀ ಅವರಿಂದ ಮತದಾನ - Bellary Latest News UpdatVoting woman without handse
ಎರಡೂ ಕೈಗಳಿಲ್ಲದ ಲಕ್ಷ್ಮೀ ಎಂಬುವರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದಲ್ಲಿ ನಡೆದಿದೆ.
ಮತದಾನ ಜಾಗೃತಿ ರಾಯಭಾರಿಯಾಗಿದ್ದ ಎರಡೂ ಕೈಗಳಿಲ್ಲದ ಲಕ್ಷ್ಮೀ ಅವರಿಂದ ಮತದಾನ
ಅವರಿಗೆ ಎರಡೂ ಕೈಗಳಿಲ್ಲದ ಕಾರಣ ಅವರು ತಮ್ಮ ಕಾಲು ಬೆರಳಿಗೆ ಶಾಹಿ ಹಾಕಿಸಿಕೊಂಡು ಮತದಾನ ಮಾಡಿದರು. ಬಳಿಕ ಅವರು ಮಾತನಾಡಿ, ಮತದಾನ ಎಲ್ಲರ ಹಕ್ಕು. ಹೀಗಾಗಿ ಪ್ರತಿಯೊಬ್ಬರು ಮತ ಚಲಾವಣೆ ಮಾಡಬೇಕು. ಮತದಾನವೇ ಪ್ರಜಾಪ್ರಭುತ್ವದ ಬೇರು ಎಂದು ಹೇಳಿದರು. ಲಕ್ಷ್ಮೀ ಅವರನ್ನು ಸಾರ್ವತ್ರೀಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯನ್ನಾಗಿ ಮಾಡಲಾಗಿತ್ತು.