ಬಳ್ಳಾರಿ :ನಗರದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ದೌರ್ಜನ್ಯ ಹೆಚ್ಚಾಗಿದ್ದು, ಅಂಗಡಿ ಮಾಲೀಕರ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಹಣ ಕೊಡಲಿಲ್ಲ ಅಂದ್ರೆ ಅಸಭ್ಯ ವರ್ತನೆ... ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಸಾರ್ವಜನಿಕರ ಆಕ್ರೋಶ - ಲೈಂಗಿಕ ಅಲ್ಪಸಂಖ್ಯಾತರು
ಅಂಗಡಿ ಮತ್ತು ಹೋಟೇಲ್ಗೆ ನುಗ್ಗುವ ಲೈಂಗಿಕ ಅಲ್ಪಸಂಖ್ಯಾತರು ಹಣ ಕೇಳುತ್ತಾರೆ. ಮಾಲೀಕರು ಹಣ ನೀಡಲು ನಿರಾಕರಿಸಿದರೆ ಕ್ಯಾಶ್ ಕೌಂಟರ್ಗೆ ಕೈ ಹಾಕಲು ಮುಂದಾಗುತ್ತಾರಂತೆ.
ಅಂಗಡಿ ಮತ್ತು ಹೋಟೇಲ್ಗೆ ನುಗ್ಗುವ ಲೈಂಗಿಕ ಅಲ್ಪಸಂಖ್ಯಾತರು ಹಣ ಕೇಳುತ್ತಾರೆ. ಮಾಲೀಕರು ಹಣ ನೀಡಲು ನಿರಾಕರಿಸಿದರೆ ಕ್ಯಾಶ್ ಕೌಂಟರ್ಗೆ ಕೈ ಹಾಕಲು ಮುಂದಾಗುತ್ತಾರಂತೆ. ಹಾಗೂ ಅದನ್ನು ತಡೆದರೆ ಅಸಭ್ಯವಾಗಿ ವರ್ತಿಸಿ ಗುಪ್ತಾಂಗ ತೋರಿಸಲು ಮುಂದಾಗುತ್ತಾರಂತೆ. ಅಲ್ಲದೆ ಮಾಲಿಕರ ಮೇಲೆ ಹಲ್ಲೆ ಕೂಡ ಮಾಡುತ್ತಾರಂತೆ.
ಪ್ರತಿ ಶುಕ್ರವಾರ, ಮಂಗಳವಾರ ಬಂತಂದ್ರೆ ಬಳ್ಳಾರಿ ನಗರದಲ್ಲಿನ ಜನರು ಮತ್ತು ವ್ಯಾಪಾರಿಗಳು ಜೀವ ಕೈಯಲ್ಲಿ ಹಿಡಿದು ಭಯದ ವಾತಾವಣದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ. ಇಂತ ಕೆಲಸ ಮಾಡುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷೆಗಳನ್ನು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.