ಕರ್ನಾಟಕ

karnataka

ETV Bharat / state

ಹೋಮ್ ಕ್ವಾರಂಟೈನ್​ಗೆ ಒಪ್ಪದ ಜನ : ಗ್ರಾಮಸ್ಥರ ಮನವೊಲಿಸಲು ಅಧಿಕಾರಿಗಳ ಹರಸಾಹಸ - ಹೋಮ್ ಐಸೋಲೇಷನ್

ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಹೋಮ್ ಐಸೋಲೇಷನ್ ಮತ್ತು ಹೋಮ್ ಕ್ವಾರಂಟೈನ್ ಆಗುವಂತೆ ಜನರಿಗೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ.

ಹೋಮ್ ಕ್ವಾರಂಟನ್​ಗೆ ಒಪ್ಪದ ಜನ
ಹೋಮ್ ಕ್ವಾರಂಟನ್​ಗೆ ಒಪ್ಪದ ಜನ

By

Published : Apr 19, 2021, 11:49 AM IST

ಹೊಸಪೇಟೆ:ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಹೋಮ್ ಐಸೋಲೇಷನ್ ಮತ್ತು ಹೋಮ್ ಕ್ವಾರಂಟೈನ್​​​ಗೆ ಜನರು ಒಪ್ಪುತ್ತಿಲ್ಲ. ಹೀಗಾಗಿ ಜನರನ್ನು ಒಪ್ಪಿಸಲು ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.

ಹೊಸಪೇಟೆ ತಹಶೀಲ್ದಾರ್ ಎಚ್.ವಿಶ್ವನಾಥ್​ ನೇತೃತ್ವದಲ್ಲಿ ಪೊಲೀಸರು, ಅಧಿಕಾರಿಗಳು ಮನೆ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಅಧಿಕಾರಿ ವಿಶ್ವನಾಥ್ ಮಾತನಾಡಿ, ಪಾಸಿಟಿವ್ ಮತ್ತು ಪ್ರಾಥಮಿಕ ಸಂಪರ್ಕಿತರ ಮನವೊಲಿಸಲು ಪ್ರಯತ್ನ ಮಾಡಲಾಗುತ್ತಿದೆ. ಹೋಮ್ ಐಸೋಲೇಷನ್ ಮತ್ತು ಹೋಮ್ ಕ್ವಾರಂಟೈನ್ ಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಜನರು ಸಹಕಾರ ಕೊಡದೇ ಹೋದರೆ ಹೇಗೆ. ಕೊರೊನಾ ನಿಯಂತ್ರಿಸಲು ಜನ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಓದಿ : ದೇಶದಲ್ಲಿ ಕೋವಿಡ್‌ ಸುನಾಮಿ: ಹೊಸದಾಗಿ 2.73 ಲಕ್ಷ ಕೇಸ್​ ಪತ್ತೆ, 1,619 ಮಂದಿ ಬಲಿ

ABOUT THE AUTHOR

...view details