ಕರ್ನಾಟಕ

karnataka

ETV Bharat / state

ವಿಜಯನಗರ: ಕೋಟಿಗಟ್ಟಲೆ ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯಿತಿಗಳು

ಬಡವರು ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಮರುಕ್ಷಣವೇ ಪವರ್ ಕಟ್. ಆದ್ರೆ ಇಲ್ಲಿ ಗ್ರಾಮಪಂಚಾಯಿತಿಗಳು ಕೋಟಿಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೂ ಜೆಸ್ಕಾಂ ಯಾವುದೇ ಕ್ರಮ ಕೈಗೊಂಡಿಲ್ಲ.

By

Published : Jun 14, 2022, 6:26 PM IST

Updated : Jun 14, 2022, 7:09 PM IST

Village panchayats that do not have paid electricity bills in Vijayanagar
ವಿಜಯನಗರದಲ್ಲಿ ವಿದ್ಯುತ್​ ಬಿಲ್​ ಕಟ್ಟದ ಗ್ರಾಮ ಪಂಚಾಯಿತಿಗಳು

ವಿಜಯನಗರ:ಕಂಪ್ಲಿ ಮತ್ತು ಹೊಸಪೇಟೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳು ಕಳೆದ ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿವೆ. ಕುಡಿಯುವ ನೀರಿನ ಮೋಟಾರು ಹಾಗೂ ಬೀದಿದೀಪಕ್ಕೆ ಬಳಸಿದ ವಿದ್ಯುತ್ ಬಿಲ್ ಬಾಕಿ ಇದಾಗಿದೆ. ಬಿಲ್ ಕಟ್ಟಿ ಎಂದು ಹೇಳುತ್ತಾ ಜೆಸ್ಕಾಂ ಸಿಬ್ಬಂದಿ ಗ್ರಾಮ ಪಂಚಾಯಿತಿಗಳಿಗೆ ಅಲೆದಲೆದು ಸಾಕಾಗಿದ್ದಾರೆ. ಆದ್ರೂ ಹಣ ಪಾವತಿಸದೇ ಗ್ರಾಮ ಪಂಚಾಯಿತಿಗಳು ಸತಾಯಿಸುತ್ತಿವೆ.

ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯಿತಿಗಳು

ಹೊಸಪೇಟೆ ತಾಲೂಕಿನ ಡಣಾಪುರ ಪಂಚಾಯಿತಿ- 6 ಕೋಟಿ 41 ಲಕ್ಷ ರೂ, ಡಣಾಯಕನಕೆರೆ ಪಂಚಾಯಿತಿ- 2 ಕೋಟಿ 74 ಲಕ್ಷ, ಚಿಲಕನಹಟ್ಟಿ ಪಂಚಾಯಿತಿ 3 ಕೋಟಿ 24 ಲಕ್ಷ, ನಾಗಲಾಪುರ 3 ಕೋಟಿ 18 ಲಕ್ಷ, ಬೈಲುವದ್ದಿಗೇರಿ 2 ಕೋಟಿ 21 ಲಕ್ಷ ಹೀಗೆ ಇತರೆ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿವೆ.

ಬಾಕಿ ವಸೂಲಾತಿಗೆ ಜೆಸ್ಕಾಂ ಸಿಬ್ಬಂದಿ ಪರದಾಡುತ್ತಿದ್ದು, ಬಿಲ್ ಕಟ್ಟಿ ಅಂತ ಪತ್ರ ವ್ಯವಹಾರವನ್ನೂ ಸಹ ಮಾಡಲಾಗಿದೆ. ಹಂತ ಹಂತವಾಗಿ ಕಟ್ಟುತ್ತೇವೆ ಎಂದು ಹೇಳಿ ಮೂಗಿಗೆ ತುಪ್ಪ ಸವರೋ ಕೆಲಸವನ್ನು ಸ್ಥಳೀಯ ಆಡಳಿತಗಳು ಮಾಡುತ್ತಿದೆ. ಜೆಸ್ಕಾಂಗೆ ಕಟ್ಟಬೇಕಾದ ಬಾಕಿ ಕಟ್ಟದೇ ಇದ್ರೆ, ಸ್ಥಾವರಗಳನ್ನು ಬಂದ್ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸಹ ಜೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ:ರಾಯಚೂರು: ಕಲುಷಿತ ನೀರು ಸೇವಿಸಿ ಮತ್ತೋರ್ವ ಬಲಿ?

Last Updated : Jun 14, 2022, 7:09 PM IST

For All Latest Updates

TAGGED:

ABOUT THE AUTHOR

...view details