ಕರ್ನಾಟಕ

karnataka

ETV Bharat / state

ವಿಜಯನಗರ: ದೇಹದ 30 ಕಡೆ ಚುಚ್ಚಿ ಜಿಮ್​ ಟ್ರೈನರ್ ಧನ್ಯಕುಮಾರ್‌​ ಹತ್ಯೆ - ಯಾವುದೋ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ

ಜಿಮ್‌ ಟ್ರೈನರ್ ಧನ್ಯಕುಮಾರ್ ಅವರನ್ನು ದುಷ್ಕರ್ಮಿಗಳು ಸುಮಾರು 30 ಕಡೆ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಮ್​​ ಟ್ರೈನರ್​​ ಧನ್ಯ ಕುಮಾರ್
ಜಿಮ್​​ ಟ್ರೈನರ್​​ ಧನ್ಯ ಕುಮಾರ್

By

Published : Apr 28, 2022, 4:42 PM IST

Updated : Apr 28, 2022, 7:58 PM IST

ವಿಜಯನಗರ: ತಡರಾತ್ರಿ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿಯ ತಾಂಡಾದಲ್ಲಿ ಜಿಮ್​​ ಟ್ರೈನರ್​​ ಧನ್ಯಕುಮಾರ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ದೇಹದ ಸುಮಾರು 30 ಕಡೆ ಚುಚ್ಚಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧನ್ಯಕುಮಾರ್ ತಡರಾತ್ರಿ ಸ್ನೇಹಿತರ ಜೊತೆಗೆ ಊಟಕ್ಕೆಂದು ಗ್ರಾಮಕ್ಕೆ ಬಂದಿದ್ದು, ಇಂದು ಬೆಳಗ್ಗೆ ಗ್ರಾಮದ ಜಮೀನೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

ಸುಮಾರು 30 ಕಡೆ ಚುಚ್ಚಿ ಭೀಕರವಾಗಿ ಜಿಮ್​ ಟ್ರೈನರ್​ ಕೊಲೆ

'ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅವರು ತಡರಾತ್ರಿ ಊಟಕ್ಕೆಂದು ಇಲ್ಲಿಗೆ ಬಂದಿದ್ರು. ಅವರ ಜೊತೆಗೆ ಯಾರು ಬಂದಿದ್ರು ಎಂಬುದರ ಬಗ್ಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ. ದಾವಣಗೆರೆಯಲ್ಲಿ ಕೆಲಸ ಮಾಡುವ ಜಾಗದಲ್ಲೂ ಸಹ ವಿಚಾರಣೆ ನಡೆಸುತ್ತಿದ್ದೇವೆ' ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ. ತಿಳಿಸಿದರು.

ಇದನ್ನೂ ಓದಿ:‘ಕಾಲಿಗೆ ಬೀಳುತ್ತೇನೆ, ನನ್ನನ್ನು ಬಿಟ್ಟು ಬಿಡಿ’; ಯಾದಗಿರಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

Last Updated : Apr 28, 2022, 7:58 PM IST

For All Latest Updates

ABOUT THE AUTHOR

...view details