ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಇದೇ 26 ರಂದು ನಡೆಸಲು ಉದ್ದೇಶಿಸಿರುವ ಬಳ್ಳಾರಿ ಜಿಲ್ಲೆ ಬಂದ್, ಶಾಂತಿಯುತವಾಗಿ ಆಚರಿಸಲು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ನಿರ್ಧರಿಸಿದ್ದು, ಬಲವಂತದ ಅಂಗಡಿ-ಮುಂಗಟ್ಟುಗಳ ಮುಚ್ಚದಿರಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ ಬಳ್ಳಾರಿಯ ಗಾಂಧಿ ಭವನದಲ್ಲಿಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಜಿಲ್ಲೆಯ ನಾನಾ ಸಂಘಟನೆಗಳು ವಿಭಿನ್ನ ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿವೆ. ಆ ದಿನ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಆಚರಿಸಲು ನಿರ್ಧರಿಸಲಾಗಿದ್ದು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ಸಂಘಟನೆಗಳು ಮುಂದಾಗಿವೆ.
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿಎಸ್ ಉಗ್ರಪ್ಪ, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಸೇರಿದಂತೆ ತುಂಗಭದ್ರಾ ರೈತ ಸಂಘ, ಕರವೇ, ಜೆಡಿಎಸ್ ಹಾಗೂ ದಲಿತಪರ ಮತ್ತು ಕನ್ನಡಪರ ಸಂಘಟನೆಗಳು ಕೂಡ ಈ ಸಭೆಯಲ್ಲಿ ಪಾಲ್ಗೊಂಡು ಶಾಂತಿಯುತ ಬಂದ್ ಆಚರಣೆಗೆ ಬೆಂಬಲ ಸೂಚಿಸಿವೆ.
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಅವರು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡೋದನ್ನ ಖಂಡಿಸಿ ನವೆಂಬರ್ 26 ರಂದು ಶಾಂತಿಯುತ ಬಂದ್ ಕರೆ ನೀಡಲಾಗಿದೆ ಎಂದರು.
ಇದನ್ನು ಓದಿ:ಬಳ್ಳಾರಿ ಜಿಲ್ಲೆ ವಿಭಜನೆಗೆ ಅಪಸ್ವರ: ಸಿಎಂ ಭೇಟಿಯಾದ ಸಚಿವ ಆನಂದ್ ಸಿಂಗ್