ಕರ್ನಾಟಕ

karnataka

ETV Bharat / state

ವಿಜಯನಗರದಲ್ಲಿ ಹಕ್ಕು ಚಲಾಯಿಸಲು ಹುಮ್ಮಸ್ಸು ತೋರದ ಮತದಾರ - ಬಿಜೆಪಿ ಅಭ್ಯರ್ಥಿ ಆನಂದಸಿಂಗ್

ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಇಂದು‌ ನಡೆದ ಮತದಾನ ಪ್ರಕ್ರಿಯೆಗೆ ಮತದಾರರು ಹುಮ್ಮಸ್ಸು‌ ತೋರಲಿಲ್ಲ. ಅಲ್ಲದೇ ಒಟ್ಟಾರೆಯಾಗಿ ಇಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ. 58.93ರಷ್ಟು ಮತದಾನ ಆಗಿದೆ.

vijayanagar-byelection-votting-overhall-news
ಪಕ್ಷೇತರ ಅಭ್ಯರ್ಥಿ ಕವಿರಾಜ ಅರಸ್ ಅವರು ಮತದಾರಿಗೆ ಸಿಹಿ ತಿನಿಸಿದರು

By

Published : Dec 5, 2019, 9:06 PM IST

ಬಳ್ಳಾರಿ:ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಇಂದು‌ ನಡೆದ ಮತದಾನ ಪ್ರಕ್ರಿಯೆಗೆ ಮತದಾರರು ಹುಮ್ಮಸ್ಸು‌ ತೋರಲಿಲ್ಲ. ಬೆಳಿಗ್ಗೆ 7 ಗಂಟೆಗೆ ಆಯಾ ಮತಗಟ್ಟೆಗಳಲ್ಲಿ ಚುನಾವಣಾ ಅಧಿಕಾರಿ ಮತ್ತು‌‌ ಸಿಬ್ಬಂದಿ ಮತಯಂತ್ರಗಳನ್ನ ಕೊಠಡಿಯಲ್ಲಿಟ್ಟು ಮತದಾರರ ಬರುವಿಕೆಗಾಗಿ ಕಾಯುತ್ತಾ ಕುಳಿತಿರೋ ದೃಶ್ಯವಂತೂ ಸಾಮಾನ್ಯವಾಗಿ ಕಂಡುಬಂತು. ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಒಬ್ಬೊಬ್ಬರಾಗಿ ಮತದಾನ ಮಾಡಲು ಮತಗಟ್ಟೆಗಳಿಗೆ ಆಗಮಿಸಿದರು.

ಬೆಳಿಗ್ಗೆ 9ರವರೆಗೆ ಕೇವಲ ಶೇ. 7.72ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ. 20.03 ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ. 34.95ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ. 47.38ರಷ್ಟು‌‌ ಮತದಾನ ಆಗಿದೆ. ಸಂಜೆ 5 ಗಂಟೆಗೆ ಶೇ. 58.93ರಷ್ಟು ಮತದಾನ ಆಗಿದೆ.

ವಿಜಯನಗರ ಕ್ಷೇತ್ರದಲ್ಲಿ ಮತದಾನಕ್ಕೆ ಮತದಾರರು ತೋರದ ಹುಮ್ಮಸ್ಸು

ಬಿಜೆಪಿ ಅಭ್ಯರ್ಥಿ ಆನಂದ್​​ ಸಿಂಗ್ ಕುಟುಂಬ ಸಮೇತರಾಗಿ ಬಂದು ನಗರದ 21ನೇ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಪತ್ನಿ ಲಕ್ಷ್ಮೀ ಆನಂದ್​ ಸಿಂಗ್, ತಂದೆ ಪೃಥ್ವಿರಾಜ ಸಿಂಗ್, ಪುತ್ರ ಸಿದ್ಧಾರ್ಥ ಸಿಂಗ್, ಪುತ್ರಿ ವೈಷ್ಠವಿ ಹಕ್ಕನ್ನು ಚಲಾಯಿಸಿದರು.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ‌ ಮತಗಟ್ಟೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ತಮ್ಮ ಪತ್ನಿ ಸಮೇತರಾಗಿ‌ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ ಹೊಸಪೇಟೆಯ ಹಿಪ್ಪಿತೇರಿ ಮಾಗಣಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತದಾರನ ಹಿಂದೆ ಬಂದ ಶ್ವಾನ: ನಗರದ ಟಿಬಿ ಡ್ಯಾಂ 67 ಮತಗಟ್ಟೆಯಲ್ಲಿ ಮಾಲೀಕನ ಹಿಂದೆ ಶ್ವಾನ ಮತಗಟ್ಟೆ ತನಕ ಬಂದಿದೆ. ಬಳಿಕ ನಾಯಿಯನ್ನು ಓಡಿಸಿದ್ದಾರೆ. ಮತದಾನ ಬಳಿಕ ಶ್ವಾನ ಅವರ ಜತೆಯಲ್ಲಿ ಮತ್ತೆ ಸಾಗಿದೆ.

ಮತದಾನ ಮಾಡಿರುವ ಫೋಟೋ ವೈರಲ್: ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಮತದಾನ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಮತದಾನ ಪ್ರಕ್ರಿಯೆ ಗುಪ್ತವಾಗಿರಬೇಕು. ಆದರೆ, ಮತದಾನ ಮಾಡಿರುವ ಫೋಟೋ ವೈರಲ್ ಆಗಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಮತದಾರರು ಆಗ್ರಹಿಸಿದರು.

ಪಕ್ಷೇತರ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು: ತಾಲೂಕಿನ 198ನೇ ಮತಗಟ್ಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಕವಿರಾಜ ಅರಸ್ ಮತದಾರಿಗೆ ಸಿಹಿ ತಿನಿಸಿದರು. ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶೇಖ್ ತನ್ವೀರ್ ಆಸೀಪ್ ತಿಳಿಸಿದರು.

ABOUT THE AUTHOR

...view details