ಬಳ್ಳಾರಿ:ಅನರ್ಹ ಶಾಸಕ ಆನಂದಸಿಂಗ್ ಅವರ ಪಕ್ಷಾಂತರ ಪರ್ವಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಅಗಸೆಕಟ್ಟೆ ಮೇಲೆ ಕುಳಿತ ಆ ಯುವಜನರನ್ನು ಮಾತಿಗೆಳೆದಾಗ, ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿದ್ದ ಆನಂದಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದ್ರು. ಆದರೂ ಕೂಡ ನಾವೆಲ್ಲ ಅವರನ್ನ ಬೆಂಬಲಿಸಿದೆವು. ಆದರೀಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಒಂದೇ ವರ್ಷದಲ್ಲಿ ಈ ರೀತಿಯಾಗಿ ಪಕ್ಷಾಂತರ ಮಾಡಿದರೆ ಹೇಗೆ. ಅವರ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ರೆ, ಅವರ ಸ್ವಾರ್ಥಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರು ಈ ಭಾಗದ ಮತದಾರರ ಬೇಡಿಕೆ ಈಡೇರಿಸುವಲ್ಲಿ ಬಹುತೇಕ ವಿಫಲರಾಗಿದ್ದಾರೆ ಎಂದು ಮತದಾರ ಪ್ರಭುಗಳು ದೂರಿದ್ದಾರೆ.