ಕರ್ನಾಟಕ

karnataka

ETV Bharat / state

ಸಚಿವ ಆನಂದ್ ಸಿಂಗ್​​ಗೆ ಅರಣ್ಯ ಖಾತೆ ನೀಡಬಾರದಿತ್ತು: ವೆಂಕಟರಾವ್ ಘೋರ್ಪಡೆ - ವಿಜಯನಗರ ಕ್ಷೇತ್ರದ ಉಪಚುನಾವಣೆ

ಸಚಿವ ಆನಂದ್ ಸಿಂಗ್ ವಿರುದ್ಧ ಅರಣ್ಯಕ್ಕೆ ಸಂಬಂಧಿಸಿದ 15 ದೂರುಗಳು ದಾಖಲಾಗಿವೆ. ಅವರಿಗೆ ಅರಣ್ಯ ಸಚಿವ ಖಾತೆಯನ್ನು ಬಿಜೆಪಿ ಸರ್ಕಾರ ನೀಡಬಾರದಿತ್ತು. ಆ ಖಾತೆಗೆ ಅವರು ಯೋಗ್ಯರಲ್ಲ ಎಂದು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಹೇಳಿದ್ದಾರೆ.

venkatarao-ghorpade
ವೆಂಕಟರಾವ್ ಘೋರ್ಪಡೆ

By

Published : Feb 21, 2020, 11:16 AM IST

ಹೊಸಪೇಟೆ :ಸಚಿವ ಆನಂದ್ ಸಿಂಗ್ ವಿರುದ್ಧ ಅರಣ್ಯ ಪ್ರದೇಶ ಒತ್ತುವರಿ ಸಂಬಂಧಿಸಿದ 15 ದೂರುಗಳು ದಾಖಲಾಗಿವೆ. ಹಾಗಾಗಿ ಅವರಿಗೆ ಅರಣ್ಯ ಸಚಿವ ಖಾತೆಯನ್ನು ಬಿಜೆಪಿ ಸರ್ಕಾರ ನೀಡಬಾರದಿತ್ತು. ಆ ಖಾತೆಗೆ ಅವರು ಯೋಗ್ಯರಲ್ಲ ಎಂದು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಹೇಳಿದ್ದಾರೆ.

ವೆಂಕಟರಾವ್ ಘೋರ್ಪಡೆ

ನಗರದಲ್ಲಿ ಇಂದು ಸಂಜೆ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷವು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಜನರಿಗೆ ಅವರು ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ಪ್ರಚಾರ ಮಾಡಿದ್ದಾರೆ. ಆದರೆ ಈ ಅದಕ್ಕೆ ಸಂಬಂಧಿಸಿದ ಮುಖ್ಯಮಂತ್ರಿಗೆ ಒತ್ತಡವನ್ನು ಹೇರುತ್ತಿಲ್ಲ. ಜನರಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರ ಸಭೆಯನ್ನು ಕರೆಯುತ್ತಿಲ್ಲ. ಅವರ ವಿಶ್ವಾಸವನ್ನು ಪಡೆದುಕೊಂಡು ವೈಜ್ಞಾನಿಕ ಸಮೀಕ್ಷೆಯನ್ನು ಮಾಡಿಸಬೇಕು ಎಂದರು.

ಅರಣ್ಯ ಸಚಿವ ಖಾತೆಯನ್ನು ಇವರಿಗೆ ಯಾವ ಆಧಾರ ಮೇಲೆ ಹಂಚಿದ್ದಾರೆ ಎಂದು ತಿಳಿಯುತ್ತಿಲ್ಲ. ಇವರ ಮೇಲೆ ಆರೋಪದ ದೂರುಗಳನ್ನು ಅಧ್ಯಯನ ಮಾಡುತ್ತೇನೆ. ನಾನೇ ದೂರಗಳನ್ನು ತೆಗಿಸುತ್ತೇನೆ ಎಂದರು.

ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ನಿಲ್ಲುತ್ತೇನೆ. ಉಪಚುನಾವಣೆಯಲ್ಲಿ ಬಿ ಫಾರ್ಮ್​ ಕೊನೆಯ ಕ್ಷಣದಲ್ಲಿ ಸಿಕ್ಕಿದೆ. ಆದರೂ ಸಹ ನನಗೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಹಕಾರವನ್ನು ನೀಡಿದ್ದಾರೆ ಎಂದರು.

ABOUT THE AUTHOR

...view details