ಬಳ್ಳಾರಿ: ಜಿಲ್ಲೆಯ ವೆಂಕಟಮ್ಮ ಕಾಲೊನಿ ಯುವಕರು ಎನ್.ಹೆಚ್ 63 ರ ಬೆಂಗಳೂರು- ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವವರಿಗೆ ಉಚಿತ ಆಹಾರ ವಿತರಣೆ ಮಾಡಿದ್ರು.
ವಲಸೆ ಹೋಗುತ್ತಿದ್ದ ಜನರಿಗೆ ಉಚಿತ ಆಹಾರ ವಿತರಿಸಿದ ಯುವಕರು - ಉಚಿತ ಆಹಾರ ವಿತರಣೆ
ಬಳ್ಳಾರಿ ಜಿಲ್ಲೆಯ ವೆಂಕಟಮ್ಮ ಕಾಲೊನಿ ಯುವಕರು ಲಾರಿ ಡ್ರೈವರ್, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ ಉಚಿತ ಆಹಾರ ವಿತರಣೆ ಮಾಡಿದ್ರು.
![ವಲಸೆ ಹೋಗುತ್ತಿದ್ದ ಜನರಿಗೆ ಉಚಿತ ಆಹಾರ ವಿತರಿಸಿದ ಯುವಕರು](https://etvbharatimages.akamaized.net/etvbharat/prod-images/768-512-6608974-603-6608974-1585654228518.jpg)
ಲಾರಿ ಡ್ರೈವರ್, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ, ಪೊಲೀಸ್, ವೈದ್ಯಕೀಯ ಮತ್ತು ಮಾಧ್ಯಮದ ಸಿಬ್ಬಂದಿಗೆ ಕುಡಿಯಲು ನೀರಿನ ಪ್ಯಾಕೇಟ್, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ನೀಡಲಾಯಿತು.
ಈಟಿವಿ ಭಾರತದೊಂದಿಗೆ ಮಾತನಾಡಿದ ವೆಂಕಟಮ್ಮ ಕಾಲೋನಿಯ ಯುವಕ ವೀರೇಂದ್ರ, ಲಾಕ್ಡೌನ್ ಆದ ಹಿನ್ನೆಲೆ ಬೆಂಗಳೂರಿನಿಂದ ಸಾಕಷ್ಟು ಕೂಲಿ ಕಾರ್ಮಿಕರು ತಮ್ಮ ಊರಿಗೆ ಬರುತ್ತಿದ್ದಾರೆ. ಅಂತಹವರಿಗೆ ಎನ್.ಹೆಚ್ 63 ರ ಬೆಂಗಳೂರು -ಬಳ್ಳಾರಿ ಹೈವೇನಲ್ಲಿ ಪ್ರಯಾಣ ಮಾಡುವ ಲಾರಿ ಡ್ರೈವರ್ಗಳಿಗೆ, ಬೈಕ್ ಸವಾರರಿಗೆ, ಕೂಲಿ ಕಾರ್ಮಿಕರಿಗೆ, ಎತ್ತಿನ ಬಂಡಿಯಲ್ಲಿ ಹೋಗುವವರಿಗೆ ಕುಡಿಯಲು ನೀರಿನ ಪ್ಯಾಕೆಟ್, ಬಾಳೆಹಣ್ಣು, ಟಿಫನ್, ಊಟವನ್ನು ಉಚಿತವಾಗಿ ಕಳೆದ ಎರಡು ದಿನಗಳಿಂದ ವಿತರಣೆ ಮಾಡುತ್ತಿದ್ದೇವೆ ಎಂದರು.