ಬಳ್ಳಾರಿ :ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣಿನ ದರಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ತರಕಾರಿ, ಹಣ್ಣಿನ ದರ ನಿಗದಿ: ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ - ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ
ಬಳ್ಳಾರಿ ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣಿನ ದರಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ಸಗಟು ವ್ಯಾಪಾರಸ್ಥರಿಂದ ಖರೀದಿ ಮಾಡಿ, ಚಿಲ್ಲರೆ ವರ್ತಕರು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಹಣ್ಣು ಮತ್ತು ತರಕಾರಿ ಉತ್ಪನ್ನಗಳು ಈ ಗರಿಷ್ಠ ನಿಗದಿತ ದರದಲ್ಲಿ ದೊರೆಯುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಅವುಗಳ ದರಗಳು ಇಂತಿವೆ.
ತರಕಾರಿ ಉತ್ಪನ್ನಗಳ ವಿವರ:
- ಟೊಮ್ಯಾಟೋ ಸಗಟು ವ್ಯಾಪಾರ ದರ ಕೆಜಿಗೆ-20, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 25 ರೂ.
- ಬದನೆಕಾಯಿ ಸಗಟು ವ್ಯಾಪಾರ ದರ ಕೆಜಿಗೆ-20, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 25 ರೂ.
- ಹಸಿಮೆಣಸಿನಕಾಯಿ ಸಗಟು ವ್ಯಾಪಾರ ದರ ಕೆಜಿಗೆ-22, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 30 ರೂ.
- ಬೆಂಡೆಕಾಯಿ, ಹಾಗಲಕಾಯಿ, ಕ್ಯಾರೆಟ್, ಅರವಿಗಡ್ಡೆ ಸಗಟು ವ್ಯಾಪಾರ ದರ ಕೆಜಿಗೆ-30, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 35 ರೂ.
- ಬೀನ್ಸ್ ಸಗಟು ವ್ಯಾಪಾರ ದರ ಕೆಜಿಗೆ-45, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 50 ರೂ.
- ನುಗ್ಗೆಕಾಯಿ, ಚೌಳೇಕಾಯಿ, ಬೂದುಗುಂಬಳಕಾಯಿ ಸಗಟು ವ್ಯಾಪಾರ ದರ ಕೆಜಿಗೆ-20, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 25 ರೂ.
- ಸೌತೇಕಾಯಿ ಸಗಟು ವ್ಯಾಪಾರ ದರ ಕೆಜಿಗೆ-22, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 27 ರೂ.
- ಈರುಳ್ಳಿ, ಗೆಣಸು ಸಗಟು ವ್ಯಾಪಾರ ದರ ಕೆಜಿಗೆ-16, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 20 ರೂ.
- ಆಲೂಗಡ್ಡೆ ಸಗಟು ವ್ಯಾಪಾರ ದರ ಕೆಜಿಗೆ-18, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 23 ರೂ.
- ತೊಂಡೆಕಾಯಿ ಸಗಟು ವ್ಯಾಪಾರ ದರ ಕೆಜಿಗೆ-18, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 22 ರೂ.
- ಕ್ಯಾಪ್ಸಿಕಂ ಸಗಟು ವ್ಯಾಪಾರ ದರ ಕೆಜಿಗೆ-35, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 40 ರೂ.
- ಹೂ ಕೋಸು ಸಗಟು ವ್ಯಾಪಾರ ದರ ಕೆಜಿಗೆ-30, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 34 ರೂ.
- ಕ್ಯಾಬೇಜ್ ಸಗಟು ವ್ಯಾಪಾರ ದರ ಕೆಜಿಗೆ-19, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 24 ರೂ.
- ಗೆಜ್ಜರಿ ಸಗಟು ವ್ಯಾಪಾರ ದರ ಕೆಜಿಗೆ-23, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 28 ರೂ.
- ಹೀರೇಕಾಯಿ ಸಗಟು ವ್ಯಾಪಾರ ದರ ಕೆಜಿಗೆ-27, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 32 ರೂ.
- ಬೀಟ್‍ರೂಟ್ ಸಗಟು ವ್ಯಾಪಾರ ದರ ಕೆಜಿಗೆ-18, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 22 ರೂ.
- ಬುಡುಮೇಕಾಯಿ ಸಗಟು ವ್ಯಾಪಾರ ದರ ಕೆಜಿಗೆ-14, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 19 ರೂ.
- ಸೋರೆಕಾಯಿ ಸಗಟು ವ್ಯಾಪಾರ ದರ ಕೆಜಿಗೆ-10, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 15 ರೂ.
- ಕಂದಗಡ್ಡೆ ಸಗಟು ವ್ಯಾಪಾರ ದರ ಕೆಜಿಗೆ-30, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 32 ರೂ.
ಹಣ್ಣು ಪದಾರ್ಥಗಳ ವಿವರ: - ಸೇಬು ಸಗಟು ವ್ಯಾಪಾರ ದರ ಕೆಜಿಗೆ-130, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 180 ರೂ.
- ಆರೇಂಜ್ ಸಗಟು ವ್ಯಾಪಾರ ದರ ಕೆಜಿಗೆ-50, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 60 ರೂ.
- ಸಪೋಟಾ ಸಗಟು ವ್ಯಾಪಾರ ದರ ಕೆಜಿಗೆ-25, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 35 ರೂ.
- ಕಲ್ಲಂಗಡಿ ಸಗಟು ವ್ಯಾಪಾರ ದರ ಕೆಜಿಗೆ-12, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 18 ರೂ.
- ಕರಬೂಜ ಸಗಟು ವ್ಯಾಪಾರ ದರ ಕೆಜಿಗೆ-12, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 15 ರೂ.
- ಅಂಜೂರು ಸಗಟು ವ್ಯಾಪಾರ ದರ ಕೆಜಿಗೆ-25, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 40 ರೂ.
- ಮಾವಿನ ಹಣ್ಣು (ರಸಪೂರಿ, ಬೆನೆಷಾನ, ಕೆಸರ್) ಸಗಟು ವ್ಯಾಪಾರ ದರ ಕೆಜಿಗೆ-30, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 50 ರೂ.
- ಮಾವಿನಹಣ್ಣು (ಹಿಮಾಹಿತಿ, ಆಪೂಸ್) ಸಗಟು ವ್ಯಾಪಾರ ದರ ಕೆಜಿಗೆ-50, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 60 ರೂ.
- ಬಾಳೆಹಣ್ಣು (ಏಲಕ್ಕಿ) ಸಗಟು ವ್ಯಾಪಾರ ದರ ಕೆಜಿಗೆ-35, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 40 ರೂ.
- ಬಾಳೆಹಣ್ಣು (ಪಚ್ಚೆ) ಸಗಟು ವ್ಯಾಪಾರ ದರ ಕೆಜಿಗೆ-15, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 20 ರೂ.
- ಮೋಸಂಬಿ ಸಗಟು ವ್ಯಾಪಾರ ದರ ಕೆಜಿಗೆ-35, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 50 ರೂ.
- ದಾಳಿಂಬೆ ಸಗಟು ವ್ಯಾಪಾರ ದರ ಕೆಜಿಗೆ-70, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 90 ರೂ.
- ಪೇರು (ಸೀಬೆ) ಸಗಟು ವ್ಯಾಪಾರ ದರ ಕೆಜಿಗೆ-30, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 35 ರೂ.
- ದ್ರಾಕ್ಷಿ (ಸೋನಾಕ) ಸಗಟು ವ್ಯಾಪಾರ ದರ ಕೆಜಿಗೆ-40, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 50 ರೂ.
- ದ್ರಾಕ್ಷಿ (ತಾಮಸನ್ ಸೀಡ್‍ಲೆಸ್) ಸಗಟು ವ್ಯಾಪಾರ ದರ ಕೆಜಿಗೆ-70, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 80 ರೂ.
- ಪಪ್ಪಾಯಿ ಸಗಟು ವ್ಯಾಪಾರ ದರ ಕೆಜಿಗೆ-20, ಚಿಲ್ಲರೆ ವ್ಯಾಪಾರ ಗರಿಷ್ಠ ದರ ಕೆಜಿಗೆ 25 ರೂ.
ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ನಿಗದಿಪಡಿಸಿದ ದರಕ್ಕಿಂತ ಯಾವುದೇ ಕಾರಣಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಮಾಡತಕ್ಕದ್ದಲ್ಲ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಪಾಸ್/ಮಾರಾಟ ಪರವಾನಿಗೆಯನ್ನು ರದ್ದುಪಡಿಸಲಾಗುವುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಎಚ್ಚರಿಸಿದ್ದಾರೆ.