ಬಳ್ಳಾರಿ:ನಗರದ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಜಯನಗರ ಜಿಲ್ಲೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ರು.
ಪ್ರತ್ಯೇಕ ವಿಜಯನಗರ ಜಿಲ್ಲೆ ಸ್ಥಾಪನೆ ಹಿನ್ನೆಲೆ: ವಾಟಾಳ್ ನಾಗರಾಜ್ ವಿರೋಧ - ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್
ಬಳ್ಳಾರಿ 1953ರಲ್ಲಿ ಕರ್ನಾಟಕಕ್ಕೆ ಸೇರಿದೆ. ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದರು
ವಾಟಾಳ್ ನಾಗರಾಜ್
ಬಳ್ಳಾರಿ ಜಿಲ್ಲೆ 1953ರಲ್ಲಿ ಕರ್ನಾಟಕಕ್ಕೆ ಸೇರಿದೆ. ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜಿಸಿ ಎರಡು ಜಿಲ್ಲೆಯನ್ನಾಗಿ ಮಾಡಬಾರದು ಎಂದು ಸರ್ಕಾರಕ್ಕೆ ಅವರು ಮನವಿ ಮಾಡಿದ್ರು.
ಅಕ್ಬೋಬರ್ 12ರಂದು ಬಳ್ಳಾರಿ ನಗರದ ಸುತ್ತಲೂ ಕನ್ನಡ ಪರ ಸಂಘಟನೆಗಳು ತೆರೆದ ವಾಹನಗಳಲ್ಲಿ ವಿಜಯನಗರ ಜಿಲ್ಲೆ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡಲಿವೆ ಎಂದು ತಿಳಿಸಿದ್ರು.