ಬಳ್ಳಾರಿ:ಹರಪನಹಳ್ಳಿ ತಾಲೂಕಿನಲ್ಲಿ ಹುಟ್ಟಿದವರೇ ಇಲ್ಲಿ ಶಾಸಕರಾಗಲಿ ಎಂದು ಹಾಗೂ ವಿಜಯನಗರದ ಪ್ರತ್ಯೇಕ ಜಿಲ್ಲೆ ರಚನೆಗೆ ಜಿಲ್ಲೆಯ ಹರಪನಹಳ್ಳಿಯ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಬೆಂಬಲ ಸೂಚಿಸಿದ್ದಾರೆ.
ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ವಚನಾನಂದ ಶ್ರೀಗಳು ಬೆಂಬಲ! - ಬಳ್ಳಾರಿ ವಿಜಯನಗರ ಪ್ರತ್ಯೇಕ ಜಿಲ್ಲೆ ಸುದ್ದಿ
ವಿಜಯನಗರದ ಪ್ರತ್ಯೇಕ ಜಿಲ್ಲೆ ರಚನೆಗೆ ಜಿಲ್ಲೆಯ ಹರಪನಹಳ್ಳಿಯ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಬೆಂಬಲ ಸೂಚಿಸಿದ್ದಾರೆ.
ವಚನಾನಂದ ಶ್ರೀಗಳು
ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿಂದು ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸಲು ನಾವೂ ಕೂಡ ಬೆಂಬಲ ಸೂಚಿಸುತ್ತೇವೆ. ವಿಜಯನಗರ ಜಿಲ್ಲೆ ಆಗಲೇ ಬೇಕು. ಈ ಮೂಲಕ ನಾವು ಯಡಿಯೂರಪ್ಪನವರಿಗೆ ನಾವು ಹೇಳುತ್ತೇವೆ. ಅಭಿವೃದ್ಧಿ ದೃಷ್ಠಿಯಿಂದ ಹೊಸಪೇಟೆ ಜಿಲ್ಲೆಯಾಗಲಿ. ಹೊಸಪೇಟೆ ಜಿಲ್ಲೆಯಾದ್ರೆ ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕಿಗೆ ಶಕ್ತಿ ಬರುತ್ತದೆ ಎಂದರು.
ಇನ್ನು ಶಾಸಕರಾಗಿ ನಮ್ಮ ಸೇವೆ ಮಾಡೋ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದರು.