ಕರ್ನಾಟಕ

karnataka

ETV Bharat / state

ವಸತಿ ಯೋಜನೆಗೆ ಶೀಘ್ರವೇ ಅನುದಾನ ಬಿಡುಗಡೆ: ಸಚಿವ ವಿ. ಸೋಮಣ್ಣ

ವಸತಿ ವಂಚಿತರಿಗೆ ಸೂರು ಒದಗಿಸುವುದಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಜಾಗ ಖರೀದಿಸುತ್ತಿದ್ದೇವೆ. ಇದು ವಸತಿ ನಿಗಮದ ಇತಿಹಾಸದಲ್ಲೇ ಮೊದಲು. ಆದರೆ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಅನುದಾನ ತಡೆ ಹಿಡಿದಿದ್ದೇನೆ. ಹೀಗಾಗಿ ಶೀಘ್ರವೇ ಸಮಸ್ಯೆ ಬಗೆಹರಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

By

Published : Feb 25, 2020, 10:19 PM IST

Housing Project
ವಸತಿ ಯೋಜನೆಗೆಶೀಘ್ರವೇ ಅನುದಾನ ಬಿಡುಗಡೆ: ವಿ. ಸೋಮಣ್ಣ

ಬಳ್ಳಾರಿ:ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಅನುದಾನ ತಡೆ ಹಿಡಿದಿದ್ದೇನೆ. ಶೀಘ್ರವೇ ಸಮಸ್ಯೆ ಬಗೆಹರಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂಬ ಸಂಕಲ್ಪವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಅವರ ಸಂಕಲ್ಪವನ್ನು ನಾವೆಲ್ಲರೂ ಒಗ್ಗೂಡಿ ಪೂರೈಸೋಣ. ಆದರೆ, ವಸತಿ ಇದ್ದವರೂ ಕೂಡ ಫಲಾನುಭವಿಗಳ ಸೋಗಿನಲ್ಲಿ ಕೆಲವರು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ‌. ಹೀಗಾಗಿ ಪರಿಶೀಲನೆ ಮಾಡಲಾಗುತ್ತಿದ್ದು, ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅನುದಾನ ಒದಗಿಸಲಾಗುವುದು ಎಂದರು.

ವಸತಿ ಯೋಜನೆಗೆಶೀಘ್ರವೇ ಅನುದಾನ ಬಿಡುಗಡೆ: ವಿ. ಸೋಮಣ್ಣ

ವಸತಿ ವಂಚಿತರಿಗೆ ಸೂರು ಒದಗಿಸುವುದಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಜಾಗ ಖರೀದಿಸುತ್ತಿದ್ದೇವೆ. ಇದು ವಸತಿ ನಿಗಮದ ಇತಿಹಾಸದಲ್ಲೇ ಮೊದಲು. ಮುಂದಿನ ದಿನಗಳಲ್ಲಿ ಪಿಡಿಒ ಮತ್ತು ಇಒಗಳ ಸಭೆ ನಡೆಸಿ ವಸತಿ ಯೋಜನೆ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ABOUT THE AUTHOR

...view details