ಕರ್ನಾಟಕ

karnataka

ETV Bharat / state

10 ವರ್ಷ ಮೋದಿಯೇ ಪ್ರಧಾನಿಯಾಗಬೇಕು: ಯುಪಿಯ ಅಭಿಮಾನಿಯಿಂದ ಬೈಕ್ ಜಾಗೃತಿ - undefined

ವಾಟ್ಸಾಪ್, ಫೇಸ್‌ಬುಕ್‌ ಇನ್ನಿತರ ನವ ಮಾಧ್ಯಮ ಬಳಸಿಕೊಂಡು ಪ್ರಚಾರ, ಜಾಗೃತಿ ಮೂಡಿಸುವುದು ಸುಲಭದ ಮಾತು.‌ ಉತ್ತರ ಪ್ರದೇಶದ ಯುವಕ ಅಭಿಷೇಕ್ ಕುಮಾರ್ ಶರ್ಮ ಎನ್ನುವವರು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ, ಅವರ ಬಗ್ಗೆ ಜಾಗೃತಿ ಮೂಡಿಸಲು ದೇಶದ ಪ್ರತಿಯೊಂದು ರಾಜ್ಯಕ್ಕೆ ಬೈಕ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಉತ್ತರ ಪ್ರದೇಶ ಮೂಲದ ಮೋದಿ ಅಭಿಮಾನಿ ಬೈಕ್ ಮೂಲಕ ಜಾಗೃತಿ.

By

Published : Apr 30, 2019, 4:42 AM IST

Updated : Apr 30, 2019, 5:15 AM IST

ಬಳ್ಳಾರಿ: ನರೇಂದ್ರ ಮೋದಿ ಅವರು ಇನ್ನು 10 ವರ್ಷ ಪ್ರಧಾನಿಯಾಗಬೇಕೆಂದು ಅವರ ಅಭಿಮಾನಿವೊಬ್ಬರು ಬೈಕ್ ಮೂಲಕ ಜಾಗೃತಿ ಮಾಡುತ್ತಿದ್ದಾರೆ. ಈ ಮೂಲಕ ಮೋದಿಗಾಗಿ ಶ್ರಮಿಸುತ್ತಿದ್ದಾರೆ.

ಇವರ ಹೆಸರು ಅಭಿಷೇಕ ಕುಮಾರ ಶರ್ಮ. ಉತ್ತರ ಪದ್ರೇಶ ಮೂಲದ ಇವರುಮಾರ್ಚ್ 14 ರಂದು ಉತ್ತರ ಪ್ರದೇಶ - ದೆಹಲಿಯಿಂದ ಈ ಜಾಗೃತಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದಾರೆ. ಸದ್ಯ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ್ದು, ಹೊಸಪೇಟೆ ತಾಲೂಕಿನ ಕಮಲಾಪುರದ ಪ್ರದೇಶ ಬಿಜೆಪಿಯ ಕಾರ್ಯಕರ್ತ ಪಟ್ಟಾಭಿರಾಮ ಅವರ ಮನೆಯಲ್ಲಿ ತಂಗಿದ್ದಾರೆ.

ಉತ್ತರ ಪ್ರದೇಶ ಮೂಲದ ಮೋದಿ ಅಭಿಮಾನಿ ಬೈಕ್ ಮೂಲಕ ಜಾಗೃತಿ.

ನಿರಂತರವಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಘಡ್, ಹರಿಯಾಣ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯ ಸುತ್ತಿ ಮೋದಿ ಪರ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.

ಈಗಾಗಲೇ 47 ದಿನ ಪೂರ್ಣಗೊಂಡಿದ್ದು, ಅಭಿಷೇಕ್ ಸದ್ಯ​ ಹಂಪಿಯಲ್ಲಿದ್ದಾರೆ. ಮೊದಲನೇ ಬಾರಿಗೆ ಹಂಪಿಗೆ ಬಂದಿದ್ದು, ಬಹಳ ಸಂತೋಷವಾಗಿದೆ. ಇಲ್ಲಿಂದ ಹೈದರಾಬಾದ್​ಗೆ ಪ್ರಯಾಣ ಮಾಡುವೆ. ನಾನು ಹೋದ ಕಡೆ ಎಲ್ಲಾ ಉತ್ತಮ ಪ್ರಕ್ರಿಯೆ ಬಂದಿದೆ, ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಲಿದ್ದಾರೆ, ಅವರ ಸೇವೆಯ ಅಗತ್ಯವಿದೆ ಎಂದಿದ್ದಾರೆ.

ಇವರು ಇಲ್ಲಿಯವರೆಗೆ 11,000 ಕಿಲೋ ಮೀಟರ್ ಪ್ರಯಾಣ ಮಾಡಿದ್ದು, ತನ್ನ ಸ್ವಂತ ಹಣದಿಂದಲೇ ಈ ಪ್ರಯಾಣ ಕೈಗೊಂಡಿದ್ದಾರೆ. ಇನ್ನೂ 12 ದಿನಗಳಲ್ಲಿ ಹೈದರಾಬಾದ್, ಮಹಾರಾಷ್ಟ್ರ , ಮಧ್ಯಪ್ರದೇಶ, ಉತ್ತರ ಪ್ರದೇಶ ನಂತರ ದೆಹಲಿ ತಲುಪಲಿದ್ದಾರೆ.

Last Updated : Apr 30, 2019, 5:15 AM IST

For All Latest Updates

TAGGED:

ABOUT THE AUTHOR

...view details