ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಕೋವಿಡ್-19 ಸೋಂಕಿತರ ಹೆಚ್ಚಳ.. ತುರ್ತು ಸೇವೆಗೆ 10 ಕ್ರೂಷರ್​​ಗಳ ಬಳಕೆ.. - emergency service

ಬಳ್ಳಾರಿ- 3, ಸಂಡೂರು - 3 ಹಾಗೂ ಹೊಸಪೇಟೆ - 4 ಕ್ರೂಷರ್ ವಾಹನಗಳನ್ನ ಒಪ್ಪಂದದ ಮೇರೆಗೆ ಪಡೆಯಲಾಗಿದೆ..

Use of 10 cruiser vehicles for emergency service
ಡಿಹೆಚ್ಓ​​ ಡಾ.ಹೆಚ್.ಎಲ್.ಜನಾರ್ದನ

By

Published : Aug 5, 2020, 9:03 PM IST

ಬಳ್ಳಾರಿ :ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದಲೂ ಖಾಸಗಿ ಕ್ರೂಷರ್ ಆ್ಯಂಬುಲೆನ್ಸ್ ವಾಹನಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಕಳೆದ 15 ದಿನಗಳ ಹಿಂದಷ್ಟೇ ಈ ಕೋವಿಡ್-19 ಸೋಂಕಿತರ ತುರ್ತು ಸೇವೆಗಾಗಿ ಕ್ರೂಷರ್ ವಾಹನಗಳನ್ನ ತಾತ್ಕಾಲಿಕವಾಗಿ ಆ್ಯಂಬುಲೆನ್ಸ್ ವಾಹನಗಳನ್ನಾಗಿ ಪರಿವರ್ತಿಸಲಾಗಿದೆ. ಈ ವಾಹನಗಳಲ್ಲಿ ಸಕಲ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಇವು​ಗಳಿಗೆ ಸೂಕ್ತ ಬಾಡಿಗೆ ಹಾಗೂ ಇಬ್ಬರು ಡ್ರೈವರ್‌ನ ನೇಮಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ 108 ಆ್ಯಂಬುಲೆನ್ಸ್ ವಾಹನಗಳು ಸಮರ್ಪಕ‌ ಕೋವಿಡ್ ಸೇವೆಯಲ್ಲಿ ತೊಡಗಿಕೊಂಡಿವೆ. ಅವುಗಳ ಜತೆಗೇ ಈ ವಾಹನಗಳೂ ಕಾರ್ಯನಿರ್ವಹಿಸುತ್ತಿವೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ಡಿಹೆಚ್ಒ​​ ಡಾ. ಹೆಚ್ ಎಲ್ ಜನಾರ್ದನ್‌ ಅವರು ಮಾತನಾಡಿ, ಬಳ್ಳಾರಿ- 3, ಸಂಡೂರು - 3 ಹಾಗೂ ಹೊಸಪೇಟೆ - 4 ಕ್ರೂಷರ್ ವಾಹನಗಳನ್ನ ಒಪ್ಪಂದದ ಮೇರೆಗೆ ಪಡೆಯಲಾಗಿದೆ. ಪ್ರತಿ ತಿಂಗಳು ಡಿಎಂಎಫ್ ಪಂಢ್‌ನಿಂದ ಅಂದಾಜು ₹42 ಸಾವಿರ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ಅಲ್ಲದೇ, ಈ ಹತ್ತು ಕ್ರೂಷರ್ ವಾಹನಗಳ‌‌ ಪೈಕಿ ಒಂದು ಮಾತ್ರ ರಿಪೇರಿಯಲ್ಲಿದೆ. ಸದ್ಯ 9 ಆ್ಯಂಬುಲೆನ್ಸ್ ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details