ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಪಟ್ಟಣ ಹೊರವಲಯದ ಕುರಿ ಹಟ್ಟಿಯ ಮೇಲೆ ಅಪರಿಚಿತ ಕಾಡು ಪ್ರಾಣಿಯೊಂದು ದಾಳಿ ನಡೆಸಿದ ಪರಿಣಾಮ 24 ಕುರಿಗಳು ಸಾವನ್ನಪ್ಪಿವೆ.
ಬಳ್ಳಾರಿಯಲ್ಲಿ ಕಾಡುಪ್ರಾಣಿ ದಾಳಿ: 24 ಕುರಿಗಳು ಸಾವು - ಬಳ್ಳಾರಿಯಲ್ಲಿ ಅಪರಿಚಿತ ಕಾಡುಪ್ರಾಣಿ ದಾಳಿ
ಕುರಿಗಳ ಮೇಲೆ ಕಾಡು ಪ್ರಾಣಿಯೊಂದು ದಾಳಿ ನಡೆಸಿದ ಪರಿಣಾಮ 24 ಕುರಿಗಳು ಸಾವನ್ನಪ್ಪಿದ ಘಟನೆ ಮರಿಯಮ್ಮನ ಹಳ್ಳಿ ಪಟ್ಟಣ ಹೊರವಲಯದಲ್ಲಿ ನಡೆದಿದೆ.

ಗ್ರಾಮದ ಹೊರ ವಲಯದಲ್ಲಿನ ಹೊಲವೊಂದರಲ್ಲಿದ್ದ ಕುರಿ ಹಟ್ಟಿಯಲ್ಲಿ ಅಂಬಣ್ಣ, ಪಂಪಾಪತಿ, ಹುಲುಗಪ್ಪ, ನಾಗಪ್ಪ ಎಂಬುವವರಿಗೆ ಸೇರಿದ್ದ 24 ಕುರಿಗಳನ್ನ ಕಾಡು ಪ್ರಾಣಿ ಕೊಂದು ಹಾಕಿದೆ. ಅದರಲ್ಲಿ ಕೆಲ ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಡಣಾಪುರ ಪಶು ವೈದ್ಯಾಧಿಕಾರಿ ಗುರುಬಸವರಾಜ ಘಟನಾ ಸ್ಥಳಕ್ಕಾಗಮಿಸಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಪಟ್ಟಣದ ಉಪತಹಶೀಲ್ದಾರ್ ಲಾವಣ್ಯ, ಡಣಾಪುರ ಗ್ರಾಮದ ಪಿಡಿಒ ಮಂಜುಳಾ ರಾಣಿ, ಕಂದಾಯ ನಿರೀಕ್ಷಕ ಅಂದಾನಗೌಡ, ಗ್ರಾಮಲೆಕ್ಕಿಗ ಶಾರದ, ಹುಸೇನದಾಫ್, ಪೇದೆ ಸಿದ್ದೇಶ, ಅರಣ್ಯ ಅಧಿಕಾರಿ ಶಿವಕುಮಾರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.