ಬಳ್ಳಾರಿ: ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ನೆರೆಯ ಆಂಧ್ರಪ್ರದೇಶ ರಾಜ್ಯದ ಕೈರಪ್ಪಲ ಗ್ರಾಮದಲ್ಲಿ ಈಚೆಗೆ ಪರಸ್ಪರ ಸಗಣಿ ಕುಳ್ಳು ಎರಚಾಟ ನಡೆದಿದ್ದು, ಅಂದಾಜು 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಸಗಣಿ ಕುಳ್ಳಿನಿಂದ ಬಡಿದಾಡಿಕೊಂಡ ಈ ಗ್ರಾಮಸ್ಥರು ಯುಗಾದಿ ಪಾಡ್ಯದ ಮರುದಿನ ನೆರೆಯ ಆಂಧ್ರಪ್ರದೇಶದ ಈ ಕೈರಪ್ಪಲ ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇಗುಲದ ಭಕ್ತರ ನಡುವೆ ನಡೆಯೋ ಈ ಕಾಳಗದಲ್ಲಿ ಸಗಣಿ ಕುಳ್ಳುಗಳನ್ನ ತೂರಾಡಿ ಹಾಗೂ ಪರಸ್ಪರ ಎರಚಾಡಿಕೊಂಡು ಭಕ್ತರು ವಿಶಿಷ್ಟವಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೊರೊನಾ ಎರಡನೇ ಅಲೆಯ ಭೀತಿಯಲ್ಲೂ ಕೂಡ ಪರಸ್ಪರ ಸಗಣಿ ಕುಳ್ಳು ಎರಚಾಟ ನಡೆಸೋ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಯುಗಾದಿ ಪಾಡ್ಯದ ನಂತರದ ಕರಿ ದಿನದಂದು ನಡೆಯೋ ಈ ಕಾಳಗ ನೋಡಲು ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಇನ್ನಿತರೆ ಕಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ. ಈ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಯುಗಾದಿ ಹಬ್ಬದ ಮಾರನೇ ದಿನ ವಿಹಾರ ಮುಗಿಸಿ ಮರಳಿ ಬರುವಾಗ ಭದ್ರಕಾಳಿ ಭಕ್ತರು ಸಗಣಿ ಎರಚುತ್ತಾರಂತೆ. ಇದಕ್ಕೆ ಪ್ರತಿಯಾಗಿ ವೀರಭದ್ರೇಶ್ವರ ಸ್ವಾಮಿಯ ಭಕ್ತರು ಕೂಡ ಸಗಣಿ ಎರಚುತ್ತಾರೆ. ಇದೊಂದು ಪಾರಂಪರಿಕ ಹಬ್ಬವಾಗಿದ್ದು, ಪ್ರತಿವರ್ಷ ಹೀಗೆ ನಡೆದುಕೊಂಡು ಬಂದಿದೆ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ಓದಿ : ಕೋವಿಡ್ ಹೆಚ್ಚಾಗುತ್ತಿದ್ದರೂ ಕುಂಭಮೇಳ ಯಾಕೆ ನಿಲ್ಲಿಸುತ್ತಿಲ್ಲಾ?