ಕರ್ನಾಟಕ

karnataka

ETV Bharat / state

ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್​ A7: ವಿ. ಎಸ್. ಉಗ್ರಪ್ಪ - ವೀರ್​ ಸಾವರ್ಕರ್​ ಭಾರತ ರತ್ನ ಸುದ್ದಿ

ವೀರ್​ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ನನ್ನ ದೃಷ್ಟಿಯಲ್ಲಿ ವೀರ ಸಾವರ್ಕರ್ ಹೋರಾಟವನ್ನೇ ಮಾಡಿಲ್ಲ ಅಂತ ಹೇಳಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ವೀರ್​ ಸಾವರ್ಕರ್​​ ಸಹ ಒಬ್ಬರಾಗಿದ್ದಾರೆ ಅಷ್ಟೇ. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾರ್ವಕರ್ A7 ಆಗಿದ್ದರು, ಇದು ಕಟು ಸತ್ಯ ಎಂದು ಉಗ್ರಪ್ಪ ಹೇಳಿದ್ದಾರೆ.

ವೀರ್​ ಸಾವರ್ಕರ್​ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಎಸ್​. ಉಗ್ರಪ್ಪ

By

Published : Oct 20, 2019, 7:18 PM IST

ಬಳ್ಳಾರಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೇ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳೆದ ಐದು ವರ್ಷಗಳಲ್ಲಿ ವೀರ್ ಸಾವರ್ಕರ್ ನೆನಪಿಗೆ ಬರಲಿಲ್ಲವೆ ಎಂದು ಮಾಜಿ ಸಂಸದ ವಿ. ಎಸ್ ಉಗ್ರಪ್ಪ ಪ್ರಶ್ನಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿ ಮತ್ತು ಕಾಂಗ್ರೆಸ್​ ಅಹಿಂಸೆ ಮೂಲಕ ಹೋರಾಟ ಮಾಡಿದ್ದಾರೆ. ಅನೇಕ ಕ್ರಾಂತಿಕಾರಿಗಳು ಹಿಂಸಾ ಮಾರ್ಗದಿಂದ ಗುಂಡಿಗೆ ಗುಂಡು ಎಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು ಎಂದರು.

ನಾನು ಅಂಡಮಾನ್ ನಿಕೋಬಾರ್ ಹೋಗಿ ಬಂದಿದ್ದೇನೆ. ಅಲ್ಲಿನ ಸೆಲ್ಯೂಲರ್ ಜೈಲು ಸಹ ನೋಡಿದ್ದೇನೆ. ಅಲ್ಲಿನ ಗೋಡೆಗಳ ಮೇಲಿನ ಬರಹ, ಕಲ್ಲು ಕೆತ್ತನೆಗಳನ್ನು ಸಹ ಗಮನಿಸಿದ್ದೇನೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟವನ್ನೇ ಮಾಡಿಲ್ಲ ಅಂತ ನಾನು ಹೇಳಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ವೀರ್​ ಸಾವರ್ಕರ್​​ ಸಹ ಒಬ್ಬರಾಗಿದ್ದಾರೆ ಅಷ್ಟೇ ಎಂದು ಉಗ್ರಪ್ಪ ತಿಳಿಸಿದರು.

ಕೇಂದ್ರದ ವಿರುದ್ಧ ವಿ. ಎಸ್​. ಉಗ್ರಪ್ಪ ಕಿಡಿ

ಸಾವರ್ಕರ್​ ಅವರು ಹಿಂಸಾವಾದಿ ಮತ್ತು ಕ್ರಾಂತಿಕಾರದಲ್ಲಿ ನಂಬಿಕೆ ಇಟ್ಟವರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್​ A7 ಆಗಿರುವುದು ಕಟು ಸತ್ಯ. ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಅವರದ್ದೇ ಆದ ಹೋರಾಟವನ್ನು ಮಾಡಿದ್ದಾರೆ ಎಂದು ವಿ‌ ಎಸ್ ಉಗ್ರಪ್ಪ ಹೇಳಿದರು.

ಬಿಜೆಪಿಯ ವಿಚಾರದಲ್ಲಿಯಲ್ಲಿ ಹಿಂದೂ ಪರಿಷತ್ ಸಹ ಒಂದು. ಅಂದಿನ ಹಿಂದೂ ಮಹಾ ಸಭೆಯೂ ಸಹ ಇಂದಿನ ಹಿಂದೂ ಪರಿಷತ್ ರೀತಿಯಲ್ಲಿತ್ತು. ಸಾವರ್ಕರ್ ವಿಚಾರಧಾರೆಯಂತೆ ಬಿಜೆಪಿಯ ವಿಚಾರಧಾರೆಗಳಿವೆ.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಒಟ್ಟು ಐದೂವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೇ ಅಮಿತ್ ಶಾ ಅವರಿಗೆ ಕಳೆದ ಐದು ವರ್ಷಗಳಲ್ಲಿ ವೀರ್​ ಸಾವರ್ಕರ್​ ಬಗ್ಗೆ ಮಾತನಾಡುವುದನ್ನು ಬಿಟ್ಟು ಮಹಾರಾಷ್ಟ್ರ ಚುನಾವಣಾಗಾಗಿ ಈ ಎಲ್ಲಾ ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಕಿಡಿಕಾರಿದರು.

ABOUT THE AUTHOR

...view details