ವಿಜಯನಗರ:ರೈಲ್ವೆ ಲೋಕೋ ಪೈಲಟ್ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಹೊಸಪೇಟೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
ರೈಲ್ವೆ ಲೋಕೋ ಪೈಲಟ್ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಸೋಂಕು! - ಹೊಸಪೇಟೆ ಸುದ್ದಿ,
ರೈಲ್ವೆ ಲೋಕೋ ಪೈಲಟ್ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ಹರಡಿರುವುದು ತಿಳಿದು ಬಂದಿದೆ.
ಹೊಸಪೇಟೆ ನಗರ
ರೈಲ್ವೆ ನಿಲ್ದಾಣದ ರನ್ನಿಂಗ್ ರೂಮ್‍ನಿಂದ ಈಗ ಮತ್ತಿಬ್ಬರಿಗೆ ಕೋವಿಡ್ ಸೋಂಕು ಹಬ್ಬಿದೆ. ಹುಬ್ಬಳ್ಳಿಯಿಂದ ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ 29 ಹೊಸ ಲೋಕೊ ಪೈಲಟ್‍ಗಳಿಗೆ ಕೊರೊನಾ ಪತ್ತೆಯಾಗಿತ್ತು. ಈಗ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ.
ಹೊಸಪೇಟೆಯಲ್ಲಿ ಸದ್ಯ 42 ಸಕ್ರಿಯ ಪ್ರಕರಣಗಳಿವೆ. ನಗರದ ಚಾಪಲ್‍ಗಡ್ಡದ ಆಪಾರ್ಟ್‍ಮೆಂಟ್ ಹಾಗೂ ರೈಲ್ವೆ ನಿಲ್ದಾಣದಲ್ಲಿನ ರನ್ನಿಂಗ್ ರೂಮ್ ಅನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಅಂತಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.