ಬಳ್ಳಾರಿ: ನಕಲಿ ದಾಖಲೆ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದ ಇಬ್ಬರು ಫೇಕ್ ಡಾಕ್ಟರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಓದಿದ್ದು ಪಿಯುಸಿ, ಆಗಿದ್ದು ಡಾಕ್ಟರ್... ಬಳ್ಳಾರಿಯಲ್ಲಿ ಇಬ್ಬರು ನಕಲಿ ವೈದ್ಯರ ಬಣ್ಣ ಬಯಲು - bellary crime news
ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ನೇತೃತ್ವದ ತಂಡ ಪಟ್ಟಣದ ಎರಡು ಕ್ಲಿನಿಕ್ ಮೇಲೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ.
![ಓದಿದ್ದು ಪಿಯುಸಿ, ಆಗಿದ್ದು ಡಾಕ್ಟರ್... ಬಳ್ಳಾರಿಯಲ್ಲಿ ಇಬ್ಬರು ನಕಲಿ ವೈದ್ಯರ ಬಣ್ಣ ಬಯಲು two fake doctors who run the clinic ,arrest](https://etvbharatimages.akamaized.net/etvbharat/prod-images/768-512-6982077-240-6982077-1588128778982.jpg)
ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ನೇತೃತ್ವದ ತಂಡ ಪಟ್ಟಣದ ಎರಡು ಕ್ಲಿನಿಕ್ ಮೇಲೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ. ಜಗದೀಶ್ ಹಾಗೂ ಷಣ್ಮುಖಪ್ಪ ಬಂಧಿತರು. ಇವರಿಂದ ಔಷಧಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇವಲ ದ್ವಿತೀಯ ಪಿಯು ಮಾತ್ರ ಓದಿದ್ದ ಜಗದೀಶ್ ಪಟ್ಟಣದ ತೇರು ಗಡ್ಡೆಯ ಬಳಿ ಕ್ಲಿನಿಕ್ ನಡೆಸುತ್ತಿದ್ದ. ಇನ್ನು ಷಣ್ಮುಖಪ್ಪ ಮಸೀದಿ ಓಣಿಯಲ್ಲಿ ಕ್ಲಿನಿಕ್ ಹೊಂದಿದ್ದು, ಅಲ್ಲಿಗೂ ಭೇಟಿ ನೀಡಿದ ಅಧಿಕಾರಿಗಳು ಔಷಧಗಳನ್ನು ವಶಕ್ಕೆ ಪಡೆದು ಎರಡೂ ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದಾರೆ.
ಇಬ್ಬರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಎರಡು ಕ್ಲಿನಿಕ್‌ಗಳಿಗೆ ಬೀಗ ಹಾಕಲಾಗಿದೆ. ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಹೇಳಿದರು.