ಹೊಸಪೇಟೆ: ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರ ವಜಾ ಹಾಗೂ ಮೂವರು ನೌಕರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎನ್ಇಕೆಎಸ್ಆರ್ಟಿಸಿಯ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಹೇಳಿದ್ದಾರೆ.
ಇಬ್ಬರು ನೌಕರರು ವಜಾ, ಮೂವರ ಅಮಾನತು: ಸಾರಿಗೆ ಅಧಿಕಾರಿ - ಹೊಸಪೇಟೆ ಬಸ್ ನಿಲ್ದಾಣ
ಕರ್ತವ್ಯಲೋಪ ಹಿನ್ನೆಲೆ ಎನ್ಇಕೆಎಸ್ಆರ್ಟಿಸಿಯ ಹೊಸಪೇಟೆ ವಿಭಾಗದ ಇಬ್ಬರನ್ನು ವಜಾ ಮಾಡಿ, ಮೂವರನ್ನು ಅಮಾನತು ಮಾಡಲಾಗಿದೆ.
ಸಾರಿಗೆ ಅಧಿಕಾರಿ ಜಿ.ಶೀನಯ್ಯ
ಕಚೇರಿಯಲ್ಲಿ ಮಾತನಾಡಿದ ಅವರು, ಇಬ್ಬರು ನೌಕರರು ಕರ್ತವ್ಯಲೋಪ ಎಸಗಿದ್ದರು. ಹಾಗಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಸಂಡೂರಿನಲ್ಲಿ ಇಬ್ಬರು ನೌಕರರು ಬಸ್ಗೆ ಕಲ್ಲು ತೂರಿದ್ದರು ಹಾಗೂ ಹರಪನಹಳ್ಳಿ ತಾಂತ್ರಿಕ ನೌಕರ ಕರ್ತವ್ಯಲೋಪ ಎಸಗಿದ್ದರು. ಹಾಗಾಗಿ ಮೂವರನ್ನು ಅಮಾನತು ಮಾಡಲಾಗಿದೆ.
ಸಂಸ್ಥೆಯ ಸಿಬ್ಬಂದಿಗೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು.ಇಲ್ಲದಿದ್ದರೆ ಕಠಿಣ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.