ಬಳ್ಳಾರಿ:ಮದುವೆ ನಿಶ್ಚಯವಾಗಿದ್ದ ಯುವಕ, ಯುವತಿ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಕುರುಗೋಡು ಮೂಲದ ವಿನಯ್ (30) ಹಾಗೂ ಸೌಜನ್ಯ (24) ಮೃತಪಟ್ಟವರು. ಒಂದು ವಾರದ ಹಿಂದೆ ಇಬ್ಬರ ವಿವಾಹ ನಿಶ್ಚಯವಾಗಿದ್ದು, ಸದ್ಯದಲ್ಲೇ ನವಜೀವನಕ್ಕೆ ಕಾಲಿಡಬೇಕೆಂದಿದ್ದರು. ವಿನಯ್ ಯುವತಿಯೊಂದಿಗೆ ಸೀಮಾಂಧ್ರದ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠಕ್ಕೆ ಹೋಗಿ ಮರಳಿ ಕುರುಗೋಡಿಗೆ ಬರುವ ವೇಳೆ ಸೇತುವೆಗೆ ಕಾರು ಡಿಕ್ಕಿಯಾಗಿದೆ.