ಬಳ್ಳಾರಿ:ಜಿಲ್ಲೆಯ ಕೊಟ್ಟೂರು ತಾಲೂಕಿನ ಹಾರಳು ಕ್ರಾಸ್ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು - undefined
ಅಪಘಾತದಲ್ಲಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕೂಡ್ಲಿಗಿಯ ಕಂದಾಯ ಇಲಾಖೆ ನೌಕರ ರೇವಣರಾಧ್ಯ(52), ವೀರಭದ್ರಯ್ಯ ಸವಣೂರು ಮಠ(84) ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಜಿಲ್ಲೆಯ ಕೂಡ್ಲಿಗಿ ಪಟ್ಟಣದಿಂದ ರಾಣೆಬೆನ್ನೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ವೇಳೆ ಹರಪನಹಳ್ಳಿಯಿಂದ ಕೊಟ್ಟೂರು ಪಟ್ಟಣದ ಮಾರ್ಗವಾಗಿ ಚಲ್ಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಎರಡು ಕಾರುಗಳಲ್ಲಿದ್ದ ಐವರಿಗೆ ಗಾಯಾಗಳಾಗಿವೆ.
ಮೃತ ಇಬ್ಬರು ಗಂಭೀರವಾಗಿ ಗಾಯಾಗೊಂಡಿದ್ದ ಪರಿಣಾಮ ನೆರೆಯ ದಾವಣಗೆರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಶಕುಂತಲ ರೇಣುಕಾರಾಧ್ಯ ಎಂಬುವರು ಗಾಯಗೊಂಡಿದ್ದು, ಅವರನ್ನ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಟ್ಟೂರು ಠಾಣೆಯ ಎಎಸ್ಐ ವಸಂತಕುಮಾರ, ತಹಶೀಲ್ದಾರ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.