ಬಳ್ಳಾರಿ: ತುಂಗಭದ್ರ ರೈತ ಸಂಘದವರು ತುಂಗಭದ್ರ ಜಲಾಶಯದ 2ನೇ ಬೆಳೆಗೆ ನೀರು ಬಿಡುವ ಹಾಗೂ ಬಳ್ಳಾರಿ ಜಿಲ್ಲೆಯ ಭತ್ತ ಕಟಾವು ಯಂತ್ರದ ಮಾಲೀಕರು ಹೆಚ್ಚು ಹಣ ಪಡೆಯುವ ಬಗ್ಗೆ ಮತ್ತು ಜಿಲ್ಲೆಯ ರೈತರ ಭತ್ತ ಖರೀದಿ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ತುಂಗಭದ್ರ ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಜಿ.ಪುರುಷೋತ್ತಮ ಗೌಡ ಮಾತನಾಡಿ, ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್ಗೆ 1,820 ರೂ. ಇದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ 1,400 ರೂ.ಗೆ ಕೂಡ ಮಾರಾಟವಾಗುತ್ತಿಲ್ಲ ಎಂದರು.
ಸರ್ಕಾರ ರೈತರ ಬಳಿ ಬರೀ 40 ಕ್ವಿಂಟಾಲ್ ಖರೀದಿ ಮಾಡುತ್ತಾರೆ. ಹೆಚ್ಚಾಗಿ ಭತ್ತ ಬೆಳೆದ ರೈತನ ಪರಿಸ್ಥತಿ ಏನು? ಅದಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಸರ್ಕಾರವೇ ಭತ್ತ ಖರೀದಿ ಮಾಡುವ ಕೆಲಸ ಆಗಬೇಕು. ಅಲ್ಲಿ ಸರ್ಕಾರವೇ ರೈಸ್ ಮಿಲ್ಗಳಿಗೆ ಭತ್ತ ಖರೀದಿ ಮಾಡುವ ಕೆಲಸ ಮಾಡಿಸುತ್ತದೆ. ರೈತರಿಗೆ ಸರ್ಕಾರವೇ ವಾರದಲ್ಲಿ ಹಣ ನೀಡುವ ಕೆಲಸ ಮಾಡುತ್ತದೆ ಎಂದರು.