ಕರ್ನಾಟಕ

karnataka

ETV Bharat / state

ಕೋವಿಡ್ ವೇಳೆ ಮಹಿಳೆಯರಿಗೆ ಸವಾಲು ಎದುರಾಗಿದ್ದವು: ಡಾ.ಇಂದ್ರಾಣಿ - ಡಾ.ಇಂದ್ರಾಣಿ

ಕೊರೊನಾ ವೇಳೆ ನಮ್ಮ ಬದುಕಿನ ಬಗ್ಗೆ ಚಿಂತೆ ಮರೆತು ಸೋಂಕಿನ ವಿರುದ್ಧ ಹೊರಾಡಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ ಹೇಳಿದ್ದಾರೆ.

Dr. Indrani
ಡಾ.ಇಂದ್ರಾಣಿ

By

Published : Mar 7, 2021, 5:27 PM IST

ಬಳ್ಳಾರಿ: ಕೋವಿಡ್ ವೇಳೆ ಮಹಿಳೆಯರಿಗೆ ಸಾಕಷ್ಟು‌ ಸಮಸ್ಯೆ, ಸವಾಲುಗಳು ಎದುರಾಗಿದ್ದವು. ಅದರಲ್ಲೂ ಈ ಫ್ರೆಂಟ್ ಲೈನ್ ವಾರಿಯರ್ಸ್‌ಗಂತೂ ಬಹಳಷ್ಟು ತೊಂದರೆಗಳು ಕಾಡಿದ್ದವು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ ಹೇಳಿದ್ದಾರೆ.

ಡಾ.ಇಂದ್ರಾಣಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ‌ ನಿಮಿತ್ತ ಮಾತನಾಡಿದ ಅವರು, ಕಳೆದ ಮಾರ್ಚ್ ತಿಂಗಳಲ್ಲಿ ನಾನು ಕೋವಿಡ್ ಸೋಂಕಿತರ‌ ಕಾಂಟ್ಯಾಕ್ಟ್ ರೈಸಿಂಗ್ ಸೆಲ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ರಾತ್ರೋರಾತ್ರಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆತಂದಾಗ, ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿರುವವರನ್ನು ಸಂಪರ್ಕಿಸಿ ಕ್ವಾರಂಟೈನ್ ಮಾಡಬೇಕಿತ್ತು.

ಮೊದಲು ಕೋವಿಡ್ ಟ್ರಾವೆಲ್ ಹಿಸ್ಟರಿಯ ಪತ್ತೆ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಕಲಿಯಬೇಕಿತ್ತು. ಅದಾಗ್ಯೂ ಕೂಡ ನಮಗೂ ಕೂಡ ಈ ಕೋವಿಡ್ ಸೋಂಕಿನ ಭಯವಿತ್ತು. ಡ್ಯೂಟಿ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುವ ಮುನ್ನವೇ ಕೋವಿಡ್ ವೈರಾಣು ಅಂಟಿಕೊಂಡಿರುತ್ತೆ ಎಂಬುದು ಸಹ ನಮಗೆ ಅರಿವಿಗಿತ್ತು.ಹೀಗಾಗಿ, ಮನೆ- ಮಂದಿ ಅಥವಾ ಮಕ್ಕಳೊಂದಿಗೆ ಬೆರೆಯೋದನ್ನೇ ಮರೆತೇ ಬಿಟ್ಟೆವು.

ಅಂಥ ಸಂದರ್ಭದಲ್ಲಿ ಫ್ರಂಟ್ ಲೈನ್ ವಾರಿಯರ್ಸ್​​ಗಳ ಪೈಕಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ನಾನಾ ಸಮಸ್ಯೆ ಹಾಗೂ ಸವಾಲು ಎದುರಿಸಿರೋದು ಕೂಡ ನನ್ನ ಅನುಭವಕ್ಕೆ ಬಂದಿದೆ. ಹೀಗಾಗಿ, ಕಳೆದ ಮಾರ್ಚ್ ತಿಂಗಳಿಂದ ಈವರೆಗೂ ಒರೋಬ್ಬರಿ 365 ದಿನಗಳೇ ಗತಿಸಿವೆಯಾದ್ರೂ ಆಗ ಭಯ ಆವರಿಸಿತ್ತು. ‌ನಗೋದನ್ನೇ ಮರೆತಿದ್ದ ನಮಗೆ ಭಯ ಇಲ್ಲದಂತಾಗಿದೆ. ಅಲ್ಪಸ್ವಲ್ಪ ನಗು, ಮನೆ - ಮಂದಿಯೆಲ್ಲಾ ಒಟ್ಟೊಟ್ಟಿಗೆ ಕುಳಿತುಕೊಂಡು ಕುಶಲೋಪರಿ ಮಾತನಾಡುವ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ABOUT THE AUTHOR

...view details