ಕರ್ನಾಟಕ

karnataka

ETV Bharat / state

ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ: ರೈತರು ಕಂಗಾಲು - ರೈತ ಕಂಗಾಲು

ತಾಲೂಕಿನ ಕಮಲಾಪುರ ಹಾಗೂ ಪಾಪಿನಾಯಕಹಳ್ಳಿ ಭಾಗದ ಹೊಲಗಳಿಗೆ ಕರಡಿ ಹಾಗೂ ಕಾಡು ಹಂದಿಗಳು ನುಗ್ಗಿ ಬೆಳೆ ನಾಶಮಾಡುತ್ತಿದ್ದು, ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

crops destroy
ಬೆಳೆ ಹಾನಿ

By

Published : Feb 1, 2021, 5:16 PM IST

ಹೊಸಪೇಟೆ:ತಾಲೂಕಿನ ಕಮಲಾಪುರ ಹಾಗೂ ಪಾಪಿನಾಯಕಹಳ್ಳಿ ಭಾಗದ ರೈತರು ಹೊಲದಲ್ಲಿ ಬೆಳೆದಿರುವ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.‌

ಬೆಳೆಗಳನ್ನು ಹಾಳು ಮಾಡಿರುವ ಕಾಡು ಪ್ರಾಣಿಗಳು

ಹೊಲಗಳಿಗೆ ದಾಳಿ ಇಡುತ್ತಿರುವ ಕರಡಿ ಹಾಗೂ ಕಾಡು ಹಂದಿ ದಾಳಿಗೆ ರೈತರು ನಲುಗಿ ಹೋಗಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಕೊರೊನಾದಿಂದ ರೈತರು ಕಂಗಾಲಾಗಿದ್ದು, ಇಂತಹ ಸಂದರ್ಭದಲ್ಲಿ ಸಾಲ-ಸೂಲ ಮಾಡಿ ಬೆಳೆದಿದ್ದ ಬೆಳೆಗಳನ್ನು ಕಾಡು ಹಂದಿಗಳು ಹಾಳು ಮಾಡಿರುವುದರಿಂದ, ರೈತರಿಗೆ ದಿಕ್ಕು ತೋಚದಂತಾಗಿದೆ.

ABOUT THE AUTHOR

...view details