ಬಳ್ಳಾರಿ :ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿ ಅನಾಥ ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅನಾಥರಿಗೆ, ನಿರ್ಗತಿಕರಿಗೆ ಊಟ ನೀಡಿದ ಮಂಗಳಮುಖಿಯರು....! - ಬಳ್ಳಾರಿ ಸುದ್ದಿ
ಬಳ್ಳಾರಿ ನಗರದಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿ ಅನಾಥ ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ 4ನೇ ವಾರ್ಡಿನ ಮಾಜಿ ಸದಸ್ಯೆ ಪರ್ವೀನ್ ಬಾನು ನೇತೃತ್ವದಲ್ಲಿ ನಾಲ್ಕಾರು ಮಂಗಳಮುಖಿಯರು ಪಾದಚಾರಿ ರಸ್ತೆ, ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಅನಾಥರು, ನಿರ್ಗತಿಕರಿಗೆ ಚಿತ್ರಾನ್ನದ ಪಾಕೆಟ್ ನೀಡುವ ಮೂಲಕ ಅವರ ಹಸಿವು ನೀಗಿಸಿದ್ದಾರೆ.
ಸಾಮಾನ್ಯವಾಗಿ ಸಂಘ, ಸಂಸ್ಥೆಗಳು, ಎನ್ಜಿಓಗಳು ಹಾಗೂ ರಾಜಕಾರಣಿಗಳ ಹಿಂಬಾಲಕರು ಮಾತ್ರ ಊಟದ ಪಾಕೆಟ್ ಹಂಚಿಕೆ ಮಾಡೋದನ್ನ ನೋಡಿದ್ದೇವೆ. ಆದ್ರೆ, ಗಣಿ ನಗರಿಯ ಮಂಗಳಮುಖಿಯರ ಇಂತಹ ಸಾಮಾಜಿಕ ಕಾರ್ಯಕ್ಕೂ ಮುಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.