ಬಳ್ಳಾರಿ :ಜಿಲ್ಲೆಯ ಹೊರ ವಲಯದ ಬೆಂಗಳೂರು ರಸ್ತೆಯಲ್ಲಿನ ಎ.ಪಿ.ಎಂ.ಸಿಯಿಂದ ಹಿಡಿದು ಮುಂಡರಗಿವರೆಗೆ ಹಾಗೆಯೇ ಬೈಪಾಸ್ನಲ್ಲಿ ಕೂಡ ಗಂಟೆಗಟ್ಟಲೆ ಸಂಪೂರ್ಣ ವಾಹನ ದಟ್ಟನೆ ಆಗಿದೆ.
ಬಳ್ಳಾರಿಯಲ್ಲಿ ಒಂದು ಗಂಟೆ ಬೆಂಗಳೂರು ರಸ್ತೆ ಜಾಮ್: ವಾಹನ ಸವಾರರ ಪರದಾಟ - traffic jam news
ಗಣಿನಾಡು ಬಳ್ಳಾರಿಯಲ್ಲಿ ಇತ್ತೀಚೆಗೆ ಲಾರಿಗಳ ಸಂಚಾರ ಹೆಚ್ಚಾಗಿರುವ ಕಾರಣ , ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದ್ರಿಂದಾಗಿ ಇತರ ವಾಹನ ಸವಾರರು ಪರದಾಡುವಂತಾಗಿದೆ.
ವಾಹನ ಸವಾರರ ಪರದಾಟ
ಬೆಂಗಳೂರು ರಸ್ತೆಯಿಂದ ಹೊಸಪೇಟೆ ಬೈಪಾಸ್ ಹೋಗುವ ಹಾಗೂ ಹೊಸಪೇಟೆಯಿಂದ ಬೆಂಗಳೂರು ಬೈಪಾಸ್‌ಗೆ ಬರುವ ವಾಹನಗಳಿಂದ ತಾಸುಗಟ್ಟಲೆ ರಸ್ತೆಯಲ್ಲಿಯೇ ಕಾಯುವ ಸ್ಥಿತಿ ಉಂಟಾಗುತ್ತಿದೆ.
ನಗರದಲ್ಲಿ ಲಾರಿಗಳ ಸಂಚಾರ ಹೆಚ್ಚಾಗಿರುವುದರಿಂದ ಈ ರೀತಿಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯ ವಾಹನ ಸವಾರರು ತಿಳಿಸಿದರು. ಈ ಸಮಯದಲ್ಲಿ ಬಳ್ಳಾರಿ ಸಂಚಾರಿ ಪೊಲೀಸ ಸಿಬ್ಬಂದಿ ಆಗಮಿಸಿ ರಸ್ತೆಯಲ್ಲಿ ಅಡ್ಡವಾಗಿ ಚಲಿಸಿದ ಲಾರಿ ಚಾಲಕರಿಗೆ ಬೈಯ್ದು, ಬೈಕ್, ಕಾರು ಆಟೋ, ಬಸ್ಗಳ ಚಾಲಕರಿಗೆ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿಕೊಟ್ಟರು.