ಕರ್ನಾಟಕ

karnataka

ETV Bharat / state

ಬಳ್ಳಾರಿ ಟ್ರಾಫಿಕ್​ ಪೊಲೀಸರ ಹಣ ವಸೂಲಿ ವಿಡಿಯೋ ವೈರಲ್​ - undefined

ಸಿರಗುಪ್ಪ ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳನ್ನ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3 ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆಪಾದನೆಯ ವಿಡಿಯೋ ಹರಿದಾಡುತ್ತಿದೆ.

ಸಿರಗುಪ್ಪ ಟ್ರಾಫಿಕ ಪೊಲೀಸರು

By

Published : May 9, 2019, 1:15 AM IST

Updated : May 9, 2019, 6:39 AM IST

ಬಳ್ಳಾರಿ: ಸಿರಗುಪ್ಪ ಹೈವೇ ರಸ್ತೆಯಲ್ಲಿ ಬಳ್ಳಾರಿ ಸಂಚಾರಿ ಪೊಲೀಸರು ಪರಿಶೀಲನೆ ಹೆಸರಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿರಗುಪ್ಪ ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಆಪಾದನೆಯ ವಿಡಿಯೋ ಹರಿದಾಡುತ್ತಿದೆ.

ಸಿರಗುಪ್ಪ ಟ್ರಾಫಿಕ ಪೊಲೀಸರ ಹಣ ವಸೂಲಿ ವಿಡಿಯೋ ವೈರಲ್​

ಸಂಚಾರಿ ಪೊಲೀಸರು ಸರಕು ಸಾಗಾಣೆಯ ವಾಹನಗಳನ್ನೇ ಟಾರ್ಗೆಟ್​ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಈ ಮಾರ್ಗದ ವಾಹನಗಳ ಚಾಲಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆಂದು ಸ್ಥಳೀಯರು ಆಪಾದಿಸಿದ್ದಾರೆ.

Last Updated : May 9, 2019, 6:39 AM IST

For All Latest Updates

TAGGED:

ABOUT THE AUTHOR

...view details