ಕರ್ನಾಟಕ

karnataka

ETV Bharat / state

ಕಂಪ್ಲಿ: ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು 19 ಜನರಿಗೆ ಗಾಯ - ಕಂಪ್ಲಿಯಲ್ಲಿ ಟ್ರ್ಯಾಕ್ಟರ್ ಪಲ್ಟಿ

7 ಜನರ ಸ್ಥಿತಿ ಚಿಂತಾಜನಕವಾಗಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಲ್ಟಿ
ಪಲ್ಟಿ

By

Published : Feb 5, 2021, 12:44 PM IST

Updated : Feb 5, 2021, 2:35 PM IST

ಬಳ್ಳಾರಿ : ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು 19 ಜನರಿಗೆ ಗಾಯಗಳಾಗಿವೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು 19 ಜನರಿಗೆ ಗಾಯ

ಟ್ರ್ಯಾಕ್ಟರ್ ಮೂಲಕ ಸುಮಾರು 30 ಜನ ಮೆಣಸಿಕಾಯಿ ಕಟಾವಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಟ್ರೈಲರ್​ನ ಆ್ಯಕ್ಸಲ್ ಕಟ್ ಆಗಿ ಕಾಲುವೆಗೆ ಬಿದ್ದಿದೆ. ಸ್ಥಳಕ್ಕೆ ಕಂಪ್ಲಿ ಠಾಣಾ ಪೊಲೀಸರು ಭೇಟಿ, ಪರಿಶೀಲಿಸಿದರು. ಘಟನೆಯಲ್ಲಿ 7 ಜನರ ಸ್ಥಿತಿ ಚಿಂತಾಜನಕವಾಗಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Feb 5, 2021, 2:35 PM IST

ABOUT THE AUTHOR

...view details