ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯ ಉಜ್ಜಿನಿ ರಸ್ತೆಯಲ್ಲಿ ನಿನ್ನೆ ರಾತ್ರಿ 10ಗಂಟೆ ವೇಳೆ ಅಪಘಾತ ಸಂಭವಿಸಿದೆ. ಬೈಕ್ಗೆ ಎದುರಿಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಸಾವನಪ್ಪಿದ್ದಾನೆ.
ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ: ಜಿಂದಾಲ್ ನೌಕರ ಸ್ಥಳದಲ್ಲಿಯೇ ಸಾವು - Bellary accident news
ಬೈಕ್ಗೆ ಎದುರಿಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಜಿಂದಾಲ್ ನೌಕರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯ ಉಜ್ಜಿನಿ ರಸ್ತೆಯಲ್ಲಿ ಘಟನೆ ನಡೆದಿದೆ.

ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಜಿಂದಾಲ್ ನೌಕರ ಸ್ಥಳದಲ್ಲಿಯೇ ಸಾವು
ಕೊಟ್ಟೂರು ತಾಲೂಕಿನ ಮಂಗಾಪುರ ಗ್ರಾಮದ ಕೆ. ನಾಗರಾಜ(35) ಮೃತ ದುರ್ದೈವಿ. ಇವರು ಜಿಂದಾಲ್ ನೌಕರನಾಗಿದ್ದು, ಸಂಡೂರಿನ ವಡ್ಡು ಗ್ರಾಮದಲ್ಲಿ ವಾಸವಿದ್ದರು ಎನ್ನಲಾಗಿದೆ. ಉಜ್ಜಿನಿಯಿಂದ ಕೂಡ್ಲಿಗಿಗೆ ಬರುವಾಗ ಶ್ರೀಸಿದ್ದಯನಗುಡ್ಡದ ಬಳಿ ಘಟನೆ ಜರುಗಿದೆ.
ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.