ಕರ್ನಾಟಕ

karnataka

ETV Bharat / state

ಹಚ್ಚ ಹಸಿರಿನಿಂದ ಕೂಡಿರುವ ಮಿಂಚೇರಿ ಗುಡ್ಡ ನೋಡಲು ಪ್ರವಾಸಿಗರ ದಂಡು - Mincheri hill in bellary

ಬಳ್ಳಾರಿ ನಗರದಿಂದ ಸುಮಾರು 13 ರಿಂದ 15 ಕಿಲೋ ಮೀಟರ್ ದೂರದಲ್ಲಿರುವ ಮಿಂಚೇರಿ ಎನ್ನುವ ಗುಡ್ಡ ಪ್ರದೇಶವನ್ನು ನೋಡಲು ನೂರಾರು ಪ್ರವಾಸಿಗರು ತಮ್ಮ‌ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ರಜೆಯ ದಿನಗಳಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಪ್ರದೇಶ ಹಚ್ಚ ಹಸಿರಿನ ವಾತಾವರಣದಿಂದ ಕಂಗೊಳಿಸುತ್ತಿರುವುದು.

ಮಿಂಚೇರಿ ಗುಡ್ಡ
ಮಿಂಚೇರಿ ಗುಡ್ಡ

By

Published : Oct 11, 2020, 3:32 PM IST

Updated : Oct 11, 2020, 5:08 PM IST

ಬಳ್ಳಾರಿ:ನಗರ ಮತ್ತು ಗ್ರಾಮೀಣ ಪ್ರದೇಶದಿಂದ ನೂರಾರು ಪ್ರವಾಸಿಗರು ಮಿಂಚೇರಿ ಗುಡ್ಡ ನೋಡಲು ಬೆಳಗಿನ ಸಮಯದಲ್ಲಿ ಅತಿ ಹೆಚ್ಚಾಗಿ ಬರುತ್ತಿದ್ದಾರೆ. ಇಲ್ಲಿಗೆ ಬಂದವರು ಫೋಟೋ ತೆಗೆದುಕೊಂಡು ಸಖತ್​ ಎಂಜಾಯ್​ ಕೂಡ ಮಾಡುತ್ತಾರೆ.

ಮಿಂಚೇರಿ ಗುಡ್ಡ ನೋಡಲು ಪ್ರವಾಸಿಗರ ದಂಡು

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರವಾಸಿಗ ಗಗನ್ ದೀಪ್ ಅವರು, ಬಳ್ಳಾರಿಯಲ್ಲಿ ಮಿಂಚೇರಿ ಅಂತ ಸ್ಥಳವಿದೆ ಎಂದು ಸಹ ತಿಳಿದಿರಲಿಲ್ಲ. ಸ್ನೇಹಿತ ಹೇಳಿದ್ದಕ್ಕಾಗಿ ಇಲ್ಲಿಗೆ ಬಂದೆವು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋರಟು ಈ ಸ್ಥಳಕ್ಕೆ ಆಗಮಿಸಿ ನೋಡಿದರೆ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶವಾಗಿದೆ. ಬಹಳ ಸಂತೋಷವಾಗುತ್ತಿದೆ. ಅಲ್ಲದೇ ಇದು ಸಾಕಷ್ಟು ಸಾರ್ವಜನಿಕರು ಬಂದು ನೋಡುವ ಸ್ಥಳವಾಗಿದೆ ಎಂದರು.

ಹಚ್ಚ ಹಸಿರಿನಿಂದ ಕೂಡಿರುವ ಮಿಂಚೇರಿ ಗುಡ್ಡ

ನಂತರ ಪ್ರವಾಸಿಗ ಬಿ. ಪಾಲಾಕ್ಷ ಮಾತನಾಡಿ, ಈ ಪ್ರದೇಶ ಉತ್ತಮವಾದ ಪರಿಸರದಿಂದ ಕೂಡಿದೆ. ಆದ್ರೆ ಅಗತ್ಯ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಒದಗಿಸಿದರೆ ಉತ್ತಮವಾಗಿರುತ್ತದೆ ಎಂದರು.‌

Last Updated : Oct 11, 2020, 5:08 PM IST

ABOUT THE AUTHOR

...view details